ನಾಗ ಚೈತನ್ಯ ಮತ್ತು ಶೋಭಿತಾ ಅವರ ಅದ್ದೂರಿ ಮದುವೆಯು ಸಿನಿಮಾ ದುನಿಯಾಯಲ್ಲಿ ದೊಡ್ಡ ಸಂಭ್ರಮದ ವಿಷಯವಾಗಿದೆ. ಈ ಸುಂದರ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆ ವಿಶಿಷ್ಟ ಶೈಲಿಯಲ್ಲಿ ‘ಅನ್ನಪೂರ್ಣ ಸ್ಟುಡಿಯೋ’ದಲ್ಲಿ ನೆರವೇರಿತು. ಅಕ್ಕಿನೇನಿ ನಾಗೇಶ್ವರ ರಾವ್ ನಿರ್ಮಾಣದ ಈ ಸ್ಟುಡಿಯೋದಲ್ಲಿ ನಾಗ ಚೈತನ್ಯ ಅವರು ತಾತನಿಗೆ ಗೌರವ ಸಲ್ಲಿಕೆ ಮಾಡಿದರು.
ಈ ಮದುವೆ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು, ಕುಟುಂಬ ಸದಸ್ಯರು, ಮತ್ತು ಸ್ನೇಹಿತರು ಭಾಗವಹಿಸಿದ್ದು, ದಂಪತಿಗೆ ಶುಭ ಕೋರಿದ್ದಾರೆ. ನಾಗ ಚೈತನ್ಯ ಅವರ ಮದುವೆ ತಂದೆ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂತೋಷ ತಂದಿದ್ದು, ನವದಂಪತಿ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಶೋಭಿತಾ ಅವರು ಮೊದಲ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಡೆಲ್ ಆಗಿ, ನಟಿ ಆಗಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಮದುವೆಯ ನಂತರ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.