ಪ್ಯಾನ್ ಇಂಡಿಯಾ ರೆಬೆಲ್ ಸ್ಟಾರ್ ಎಂದೇ ಹೆಸರು ಮಾಡಿರುವ ಪ್ರಭಾಸ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಪ್ರೀತಿಯ ಸೂಪರ್ಸ್ಟಾರ್ ಮತ್ತು ನೆಚ್ಚಿನ ಪ್ರಿಯತಮೆಯು “ದಿ ರಾಜಾ ಸಾಬ್” ಎಂಬ ಮುಂಬರುವ ಪ್ರಾಜೆಕ್ಟ್ಗಾಗಿ ನಿರ್ದೇಶಕ ಮಾರುತಿಯೊಂದಿಗೆ ಕೈ ಜೋಡಿಸಿದ್ದಾರೆ. 2024 ರಲ್ಲಿ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಒಂದೇ ಸಿನಿಮಾ ಬಿಡುಗಡೆ ಆಯ್ತು. ಆದರೆ 2025 ರಲ್ಲಿ ಪ್ರಭಾಸ್ ನಟನೆಯ ಎರಡು ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇತ್ತು.
ಪ್ರಭಾಸ್ ನಟನೆಯ ಹಾರರ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ದಿ ರಾಜಾ ಸಾಬ್’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಸಿದ್ದವಾಗಿತ್ತು. ಏಪ್ರಿಲ್ 10 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಅನಧಿಕೃತ ಘೊಷಣೆಯೂ ಆಗಿತ್ತು. ಚಿತ್ರತಂಡವೇ ಏಪ್ರಿಲ್ 10ರ ದಿನಾಂಕವನ್ನು ಘೋಷಿಸಿತ್ತು. ಆದರೆ ಈಗ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಗೆ ಹೆಚ್ಚು ಸಮಯ ನೀಡಬೇಕಾಗಿ ಬಂದಿರುವ ಕಾರಣ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆಯಂತೆ. ಸಿನಿಮಾದಲ್ಲಿ ಸಾಕಷ್ಟು ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ಇದಕ್ಕೆ ಹೆಚ್ಚಿನ ಸಮಯದ ಅಗತ್ಯತೆ ಇರುವ ಕಾರಣ ಹಾಗೂ ಆತುರದಲ್ಲಿ ಸಿನಿಮಾ ಬಿಡುಗಡೆ ಬೇಡವೆಂದು ಖುದ್ದು ಪ್ರಭಾಸ್ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆಯಂತೆ. ಅಂದುಕೊಂಡ ದಿನಾಂಕಕ್ಕಿಂತಲೂ ಕನಿಷ್ಟ ಮೂರು ತಿಂಗಳು ತಡವಾಗಿ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪ್ರಭಾಸ್ ಎರಡು ಷೇಡ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಾಯಕಿ. ಸಿನಿಮಾ ಹಾರರ್ ಮತ್ತು ರೊಮ್ಯಾಂಟಿಕ್ ಕತೆಯನ್ನು ಒಳಗೊಂಡಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಜಪಾನ್ ದೇಶದಲ್ಲಿ ಅದ್ಧೂರಿಯಾಗಿ ಮಾಡಲು ಈಗಾಗಲೇ ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಿನಿಮಾದ ಎಲ್ಲ ಹಾಡುಗಳು ಈಗಾಗಲೇ ರೆಡಿಯಾಗಿವೆ ಎಂದು ಸಂಗೀತ ನಿರ್ದೇಶಕ ಎಸ್ ತಮನ್ ಹೇಳಿದ್ದಾರೆ. ಪ್ರಭಾಸ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ‘ರಾಜಾ ಸಾಬ್’, ‘ಸಲಾರ್ 2’, ರಘು ಹನುಪುಡಿಯ ಹೊಸ ಸಿನಿಮಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಲಿರುವ ‘ಸ್ಪಿರಿಟ್’ ಇವುಗಳ ಜೊತೆಗೆ ಹೊಂಬಾಳೆ ನಿರ್ಮಾಣ ಮಾಡಲಿರುವ ಎರಡು ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಸಾಕಷ್ಟು ಸಿನಿಮಾಗಳು ಪ್ರಭಾಸ್ ಕೈಯಲ್ಲಿವೆ ಆದರೆ ಸಿನಿಮಾ ಬಿಡುಗಡೆ ಮಾತ್ರ ತಡವಾಗುತ್ತಲೇ ಇದೆ.