ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ನೆನ್ನೆ ಅರೆಸ್ಟ್ ಆಗಿದ್ದರು. ನಂತರ 24 ಗಂಟೆಯೊಳಗೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರ ಅರೆಸ್ಟ್ ಆಗಿತ್ತು. ಇಂದು ಬೆಳಗ್ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಚಂಚಲಗೂಡ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನಟ ಅಲ್ಲು ಅರ್ಜುನ್ ಅವರು ನಿನ್ನೆ ರಾತ್ರಿ ಚಂಚಲಗೂಡ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಜೈಲು ಅಧಿಕಾರಿಗಳು ಅಲ್ಲು ಅರ್ಜುನ್ ಅವರಿಗೆ ಕೈದಿ ಸಂಖ್ಯೆ 7697 ನೀಡಿದ್ದರು. ಇಡೀ ರಾತ್ರಿ ಅಲ್ಲು ಅರ್ಜುನ್ ಅವರು ನೆಲದ ಮೇಲೆ ಮಲಗಿದ್ದರು ಅನ್ನೋ ಮಾಹಿತಿ ಸಿಕ್ಕಿದೆ.
ನಿನ್ನೆ ಸಂಜೆ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಜಾಮೀನು ಆದೇಶದ ಪ್ರತಿ ನಿನ್ನೆ ರಾತ್ರಿವರೆಗೂ ಜೈಲು ಅಧಿಕಾರಿಗಳಿಗೆ ಸಿಕ್ಕಿರಲಿಲ್ಲ. ಜಾಮೀನು ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳು ಪರಿಶೀಲಿಸಬೇಕಾಗಿತ್ತು. ಹೀಗಾಗಿ ನಿನ್ನೆ ರಾತ್ರಿಯೇ ಅಲ್ಲು ಅರ್ಜುನ್ ಬಿಡುಗಡೆ ಮಾಡಲಿಲ್ಲ. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಚಂಚಲಗೂಡ ಜೈಲು ಅಧಿಕಾರಿಗಳು ಇಂದು ಬೆಳಗ್ಗೆ ಅಲ್ಲು ಅರ್ಜುನ್ ಅವರನ್ನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಇಂದು ಬೆಳಗ್ಗೆ 6.40ಕ್ಕೆ ಅಲ್ಲು ಅರ್ಜುನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.