RRR ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಯಾವಾಗಲೂ ಶೂಟಿಂಗ್ಗಳಲ್ಲಿ ತುಂಬಾ ಬ್ಯುಸಿ ಆಗಿರುತ್ತಾರೆ. ಸಿನಿಮಾ ಡೈರೆಕ್ಟ್ ಮಾಡುವಾಗ ಕ್ಯಾಮೆರಾ ಉಂಟು, ತಾವು ಉಂಟು ಎನ್ನುವಂತೆ ಇರುತ್ತಾರೆ. ಇತರೆ ಕಾರ್ಯಕ್ರಮಗಳ ಕಡೆಗೆ ಗಮನ ಹರಿಸುವುದು ತುಂಬಾ ಕಡಿಮೆ. ಕುಟುಂಬದ ಕಡೆ ಗಮನ ಕೊಟ್ಟರೂ ಮದುವೆ ಸಮಾರಂಭಗಳಲ್ಲಿ ಎಂದಿಗೂ ಡ್ಯಾನ್ಸ್ ಮಾಡಲ್ಲ, ತುಂಬಾ ನಾಚುತ್ತಾರೆ. ಆದರೆ ವೈರಲ್ ಆದ ವಿಡಿಯೋದಲ್ಲಿ ರಾಜಮೌಳಿ, ಪತ್ನಿ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿರುವುದು ಎಲ್ಲರಿಗೂ ಆಚ್ಚರಿ ಮೂಡಿಸಿದೆ. ರಾಜಮೌಳಿ ಅವರು ಈ ತರ ಡ್ಯಾನ್ಸ್ ಮಾಡುತ್ತಾರಾ ಎಂದು ಎಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುವಂತೆ ಮಾಡಿದ್ದಾರೆ. ರಾಜಮೌಳಿಯವರು ತಮ್ಮ ಪತ್ನಿ ರಮಾ ರಾಜಮೌಳಿ ಅವರ ಜೊತೆ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ರಿಯಲ್ ಲೈಫ್ನಲ್ಲಿ ಹೀರೋಗಳು ನಾಚುವಂತೆ ಸ್ಟೆಪ್ಸ್ ಹಾಕಿದ್ದು ರಾಜಮೌಳಿಯಲ್ಲಿ ಈ ಟ್ಯಾಲೆಂಟು ಕೂಡ ಇದೆಯಾ ಎಂದು ತುಟಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಏಕೆಂದರೆ ಯಾವ ಸಿನಿಮಾ ಕಾರ್ಯಕ್ರಮಗಳಲ್ಲಾದರೂ ಅವರು ಮಾತನಾಡುವುದಕ್ಕೆ ಹಿಂದೇಟು ಹಾಕುವಂತವಹ ಸ್ವಭಾವದವರು. ಈ ರೀತಿ ಡ್ಯಾನ್ಸ್ ಮಾಡಿದ್ದಾರೆ ಎಂದರೆ ನಂಬೋದಕ್ಕೆ ಆಗಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್.
ತೆಲುಗು ನಟ ರವಿತೇಜ ಅವರ ‘ಅಮ್ಮ ನಾನಾ ಓ ತಮಿಳು ಅಮ್ಮಾಯಿ’ ಸಿನಿಮಾದಲ್ಲಿನ ಲಂಚ್ಕೀ ವಸ್ತಾವಾ, ಮಂಚ್ಕೀ ವಸ್ತಾವಾ ಎನ್ನುವ ಹಾಡಿಗೆ ರಾಜಮೌಳಿ ಕುಣಿದಿದ್ದಾರೆ. ಇನ್ನು ರಾಜಮೌಳಿ ದಂಪತಿ ಡ್ಯಾನ್ಸ್ ಮಾಡಿರುವುದು ಯಾವ ಸಮಾರಂಭ, ಎಲ್ಲಿ ನಡೆದಿರುವುದು ಎಂದು ತಿಳಿದು ಬಂದಿಲ್ಲ. ಆದರೆ ಸಮಾರಂಭದಲ್ಲಿ ಮಾತ್ರ ರಾಜಮೌಳಿ ಎಲ್ಲರನ್ನೂ ಆಶ್ಚರ್ಯ ಪಡುವಂತೆ ಡ್ಯಾನ್ಸ್ ಮಾಡಿರುವುದು ಫುಲ್ ಶಾಕ್ ಆಗಿದೆ.