ನಗರದಲ್ಲಿ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಕಾರಣಕ್ಕೆ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ. ಕೆಂಗೇರಿ ಉಪನಗರದ ಸುರನಾ ಕಾಲೇಜು ಸಭಾಂ ಗಣದಲ್ಲಿ ಶನಿವಾರ ಸಂಚಾರ ಪೊಲೀಸರು ಆಯೋಜಿ ಸಿದ್ದ ‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರ ಪ್ರಶ್ನೆಗಳಿಗೆ ಆಯುಕ್ತರು ಉತ್ತರಿಸಿದರು.
ಕೆಂಗೇರಿ ವ್ಯಾಪ್ತಿ ವಾಹನಗಳ ಓಡಾ ಟಕ್ಕೆ ತೊಂದರೆಯಾಗುತ್ತಿದೆ. ನೋ ಪಾರ್ಕಿಂಗ್ ಪ್ರದೇಶದಲ್ಲಿ ಜನರು ವಾಹನ ನಿಲ್ಲಿಸುವುದರಿಂದ ಓಡಾಡಲು ಸಾಧ್ಯವಾ ಗುತ್ತಿಲ್ಲ ಎಂದು ಕೆಲವರು ದೂರು ನೀಡಿದರು. ಈ ಅಹವಾಲುಗಳಿಗೆ ಪ್ರತಿಕ್ರಿ ಯಿಸಿದ ಆಯುಕ್ತ ದಯಾ ನಂದ್ ಅವರು, ನಗರದಲ್ಲಿ ನಿರ್ಬಂಧಿಸಿರುವ ಟೋಯಿಂಗ್ ಆರಂಭಿಸಲು ಚಿಂತನೆ ನಡೆದಿದೆ ಎಂದರು. ಜನರು ಬೇಕಾಬಿಟ್ಟಿ ವಾಹನ ನಿಲ್ಲಿಸುವುದ ರಿಂದ ಇತರೆ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಇದೂ ಆ ರಸ್ತೆಯಲ್ಲಿ ವಾಹನ ದಟ್ಟಣೆಗೂ ಕಾರಣ ವಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಟೋಯಿಂಗ್ ವ್ಯವಸ್ಥೆ ಮರು ಜಾರಿಗೆ ಆಲೋಚನೆ ಇದೆ. ಈ ಹಿಂದೆ ಜಾರಿಯಲ್ಲಿದ್ದ ಟೋಯಿಂಗ್ ವ್ಯವಸ್ಥೆ ಬಗ್ಗೆ ಕೆಲವು ಸಮಸ್ಯೆಗಳಿದ್ದವು. ಹೀಗಾಗಿ ಆ ವ್ಯವಸ್ಥೆಯನ್ನು ಪರಿಷ್ಕರಿಸಿ ಮತ್ತೆ ಜಾರಿಗೊ ಳಿಸುವ ಬಗ್ಗೆ ಯೋಚನೆ ಇದೆ ಎಂದು ಆಯುಕ್ತರು ಹೇಳಿದರು. ಈ ಕಾರ್ಯ ಕ್ರಮದಲ್ಲಿ ನಗರ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಹಾಗೂ ಪಶ್ಚಿಮ ವಿಭಾಗ (ಸಂಚಾರ)ದ ಡಿಸಿಪಿ ಅನಿತಾ ಹದ್ದಣ್ಣನವರ್ ಉಪಸ್ಥಿತರಿದ್ದರು.