ಭಾರತದ ಎಲ್ಲಾ ಉಪ್ಪು ಮತ್ತು ಸಕ್ಕರೆಯ ಬ್ರ್ಯಾಂಡ್ಗಳು ಪ್ಲಾಸ್ಟಿಕ್ನ ಸೂಕ್ಷ್ಮಕಣಗಳನ್ನು ಹೊಂದಿವೆ. ಪ್ಯಾಕ್ ಅಥವಾ ಪ್ಯಾಕೇಜ್ ಹೊರತಾದ ಸಣ್ಣ ಅಥವಾ ದೊಡ್ಡ ಬ್ರ್ಯಾಂಡ್ನ ಉಪ್ಪುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ ಎಂಬ ಆತಂಕಕಾರಿ ವಿಷಯವನ್ನು ಅಧ್ಯಯನ ಬಹಿರಂಗಪಡಿಸಿದೆ.
ಉಪ್ಪು, ಸಕ್ಕರೆಯಲ್ಲಿನ ಮೈಕ್ರೋಪ್ಲಾಸ್ಟಿಕ್ ಕುರಿತು ಪರಿಸರ ಸಂಶೋಧನಾ ಸಂಘಟನೆ ಟಾಕ್ಸಿಕ್ಸ್ ಲಿಂಕ್ ಈ ಸಂಶೋಧನೆ ನಡೆಸಿದೆ. ಇದಕ್ಕಾಗಿ ಟೇಬಲ್, ಕಲ್ಲು, ಸಮುದ್ರ ಮತ್ತು ಸ್ಥಳೀಯ ಕಚ್ಛಾ ಉಪ್ಪು ಸೇರಿದಂತೆ 10 ಬಗೆಯ ಉಪ್ಪನ್ನು ಹಾಗೆಯೇ ಆನ್ಲೈನ್ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸಿದ 5 ವಿಧದ ಸಕ್ಕರೆಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಧ್ಯಯನದಲ್ಲಿ ಸಕ್ಕರೆ ಮತ್ತು ಉಪ್ಪಿನ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶ ಇರುವುದು ಕಂಡುಬಂದಿದೆ. ಈ ಮೈಕ್ರೋಪ್ಲಾಸ್ಟಿಕ್ಗಳು 0.1 ಎಂಎಂ ನಿಂದ 5 ಎಂಎಂ ವರೆಗಿನ ಗಾತ್ರ ಹೊಂದಿವೆ. ಅಧಿಕ ಮಟ್ಟದ ಮೈಕ್ರೋಪ್ಲಾಸ್ಟಿಕ್ಗಳು ಐಯೋಡೈಸ್ಡ್ ಉಪ್ಪಿನಲ್ಲಿವೆ. ಇದರಲ್ಲಿ ಬಹು ಬಣ್ಣದ ತೆಳುವಾದ ಫೈಬ್ರೆ ಮತ್ತು ಫಿಲ್ಮ್ಸ್ ದೊರೆತಿದೆ.
“ನಮ್ಮ ಅಧ್ಯಯನದ ಉದ್ದೇಶ ಮೈಕ್ರೋಪ್ಲಾಸ್ಟಿಕ್ಸ್ ವಿಷಯದ ಕುರಿತು ಗಮನಹರಿಸುವುದು. ಹಾಗೆಯೇ ಈ ಕುರಿತು ನೀತಿ, ಕಾರ್ಯರೂಪನೆ ಮಾಡುವ ಮೂಲಕ ಇದರ ಅಪಾಯವನ್ನು ತಗ್ಗಿಸುವುದಾಗಿದೆ” ಎಂದು ಟಾಕ್ಸಿಕ್ಸ್ ಲಿಂಕ್ ಸಂಸ್ಥಾಪಕ ನಿರ್ದೇಶಕ ರವಿ ಅಗರ್ವಾಲ್ ತಿಳಿಸಿದ್ದಾರೆ. ಈ ಹಿಂದಿನ ಅಧ್ಯಯನದಲ್ಲಿ ಭಾರತೀಯರು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಮಿತಿಗಿಂತ ಹೆಚ್ಚಾಗಿ ಭಾರತೀಯರು ಉಪ್ಪು (10.98 ಗ್ರಾಂ) ಮತ್ತು ಸಕ್ಕರೆ (10 ಸ್ಪೂನ್) ಸೇವಿಸುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು.