- ಗೂಗಲ್ ಟ್ರಾನ್ಸ್ಲೇಟ್ಗೆ ಸೇರಿದ ತುಳು ಭಾಷೆ
- ಗೂಗಲ್ ಕಂಪನಿಯು ತುಳುವಿಗೆ ಸ್ಥಾನ ನೀಡಿದೆ
ಗೂಗಲ್ ಟ್ರಾನ್ಸ್ಲೇಟ್ಗೆ ತುಳು ಭಾಷೆಯನ್ನು ಸೇರಿಸಲಾಗಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡಲು ಸರ್ಕಾರಕ್ಕೆ ಇನ್ನು ಸಾಧ್ಯವಾಗಿಲ್ಲ. ಆದರೆ ಜಗತ್ತಿನ ಟೆಕ್ ದೈತ್ಯ ಗೂಗಲ್ ಕಂಪನಿಯು ತುಳುವಿಗೆ ಸ್ಥಾನ ನೀಡಿದೆ. ತುಳು ಸೇರಿದಂತೆ ಜಗತ್ತಿನ 110 ಭಾಷೆಗಳನ್ನು ಗೂಗಲ್ ಟ್ರಾನ್ಸ್ಲೇಟ್ಗೆ ಸೇರಿಸಿರುವುದಾಗಿ ಗೂಗಲ್ ತಿಳಿಸಿದೆ. ಇನ್ನು ತುಳುವಿಗೆ ಜಾಗತಿಕ ಮನ್ನಣೆ ಸಿಕ್ಕಿದ್ದು ಆ ಭಾಷಿಕರಿಗೆ ಸಂತಸ ತಂದಿದೆ.