ಕೇಬಲ್ ದಿನಾಚರಣೆ ಅಂಗವಾಗಿ ಕಲ್ಪತರುನಾಡು ತುಮಕೂರಿನಲ್ಲಿ ಇಂದು 24 ನೇ ರಾಜ್ಯಮಟ್ಟದ ಕೇಬಲ್ ಡೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು. ತುಮಕೂರು ಜಿಲ್ಲಾ ಕೇಬಲ್ ಆಪರೇಟರ್ಸ್ ಮತ್ತು ಇಂಟರ್ನೆಟ್ ಪ್ರೊವೈಡರ್ಸ್ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮವನ್ನ ನಡೆಸಲಾಯಿತು.
ಕೇಬಲ್ ಡೇ ಕಾರ್ಯಕ್ರಮದಲ್ಲಿ ಕೇಬಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಪ್ಯಾಟ್ರಿಕ್, ರಾಜು, ಜಿಲ್ಲಾಧ್ಯಕ್ಷ ಬಿ.ಎನ್ ಮಂಜುನಾಥ್, ಕೇಬಲ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ರಾಮಪ್ರಸಾದ್ ಗೌಡ, ಗೌರವಾಧ್ಯಕ್ಷ ಸುರೇಶ್, ಮುಖ್ಯ ಅತಿಥಿಯಾಗಿ ಖಾಸಗಿ ಪತ್ರಿಕೆ ಸಂಪಾದಕ ನಾಗಣ್ಣ. ಬೆಸ್ಕಾಂ ಇ.ಇ ಪ್ರಶಾಂತ್ ಕೂಡ್ಲಿಗಿ, ಹಾಗೂ ಮುಖ್ಯ ಭಾಷಣಕಾರರಾಗಿ ಖ್ಯಾತ ಪತ್ರಕರ್ತ ಗೌರಿಶ್ ಅಕ್ಕಿ, ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೇಬಲ್ ಅಸೋಸಿಯೇಷನ್ ಸಂಘಟನೆ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ರು.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಇಂದಿನ ದಿನಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ತಂತ್ರಜ್ಞಾನ ಸವಾಲುಗಳನ್ನ ಪ್ರತಿಯೊಬ್ಬರು ಹೇಗೆ ಎದುರಿಸಿ ಕೆಲಸ ನಿರ್ವಹಿಸಬೇಕು ಎಂಬುದರ ಬಗ್ಗೆ ಮನವರಿಕೆ ಮಾಡಲಾಗಿತು. ಇದಲ್ಲದೇ ಹಿರಿಯ ಕೇಬಲ್ ಆಪರೇಟರ್ಸ್ ಗಳ ಸೇವೆಗಳನ್ನ ಗುರುತಿಸಿ ಅವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು.