ತುಮಕೂರು ಜಿಲ್ಲೆಯಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದೈಹಿಕ ವಿಕಲಚೇತನರಿಗೆ ಮೋಟಿವೇಷನಲ್ ವೀಲ್ಚೇರ್ ಮತ್ತು SSLC ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ವಿವಿಧ ಬಗೆಯ ವಿಕಲಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಆಹ್ವಾನಿಸಲಾಗಿದೆ.
ಜಿಲ್ಲಾ ಪಂಚಾಯತ್ ವಿವಿಧ ಕಾರ್ಯ ಕ್ರಮಗಳಡಿ ಕ್ರೋಢೀಕೃತಗೊಂಡಿರುವ ಶೇ.5ರ ಅನುದಾನದಲ್ಲಿ ಈ ಸೌಲಭ್ಯ ನೀಡಲಾಗುತ್ತಿದ್ದು, ಆಸಕ್ತ ವಿಕಲಚೇತನ ವ್ಯಕ್ತಿ, ವಿದ್ಯಾರ್ಥಿಗಳು ಆಗಸ್ಟ್ 3ರೊಳಗಾಗಿ ಆಯಾ ತಾಲೂಕು ಪಂಚಾಯಿತಿಗಳಲ್ಲಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ರಿಗೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು. ಲ್ಯಾಪ್ಟಾಪ್ ಪಡೆಯಲು ದೃಷ್ಟಿದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಉಳಿದ ಬಗೆಯ ವಿಕಲಚೇತನ ವಿದ್ಯಾರ್ಥಿಗಳಾಗಿರಬೇಕು. SSLC ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ಬಗ್ಗೆ ಪ್ರಮಾಣ ಪತ್ರ, ಇಲಾಖೆ ಅಥವಾ ಇತರೆ ಯಾವ ಮೂಲಗಳಿಂದ ಲ್ಯಾಪ್ಟಾಪ್ ಪಡೆಯದಿರುವ ಬಗ್ಗೆ ದೃಢೀಕರಣ ಸಲ್ಲಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ ತಿಳಿಸಿದ್ದಾರೆ.