- ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ
- ಎಸ್ಐಟಿ ಮತ್ತು ಪೊಲೀಸರು ಅವರ ಕೆಲಸ ಮಾಡುತ್ತಾರೆ
- ಅಗತ್ಯ ಬಿದ್ದರೆ ಎಸ್ಐಟಿ ಯಡಿಯೂರಪ್ಪ ಅವರನ್ನು ಅರೆಸ್ಟ್̤
ತುಮಕೂರು: ರಾಜ್ಯದ ಹಿರಿಯ ಮುತ್ಸದ್ಧಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಅಲ್ಲದೇ ವಕೀಲ ಬಾಲನ್ ಮೂಲಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಬಿ ಎಸ್ ಯಡಿಯೂರಪ್ಪ ಅರೆಸ್ಟ್ ಆಗ್ತಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈ ಕುರಿತಂತೆ ತುಮಕೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್, ಎಸ್ಐಟಿಯಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಜೂನ್ 15 ರೊಳಗಾಗಿ ಚಾರ್ಜ್ಶೀಟ್ ಸಲ್ಲಿಸಬೇಕಾಗಿರುತ್ತದೆ. ಹೀಗಾಗಿ ಹೇಳಿಕೆ ಪಡೆಯಲು ವಿಚಾರಣೆಗೆ ಬರಬೇಕು ಅಂತ ನೋಟೀಸ್ ಕೊಟ್ಟಿದ್ದಾರೆ.
ಎಸ್ಐಟಿ ಮತ್ತು ಪೊಲೀಸರು ಅವರ ಕೆಲಸ ಮಾಡುತ್ತಾರೆ. ಅಗತ್ಯ ಬಿದ್ದರೆ ಎಸ್ಐಟಿ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡುಬಹುದು. ಅದನ್ನು ನಾನು ಹೇಳಲು ಬರುವುದಿಲ್ಲ. ಎಸ್ಐಟಿಗೆ ಅಧಿಕಾರವಿದ್ದು, ಅವರ ಕೆಲಸ ಅವರು ಮಾಡುತ್ತಾರೆ ಎಂದರು.