- ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿದ ಪತಿ
- ಕತ್ತು ಹಾಗೂ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ಭೀಕರ ಹತ್ಯೆ
- ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವೆ ಆಗಾಗ ಗಲಾಟೆ
ತುಮಕೂರು : ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುಗರ್ದ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ ಮೃತ ದುರ್ದೈವಿ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾಗಿದ್ದ ಶಿವರಾಮ್ ಎಂಬಾತ ತನ್ನ ಪತ್ನಿಯ ಕತ್ತು ಹಾಗೂ ದೇಹದ ಇತರ ಅಂಗಾಂಗಗಳನ್ನು ಕತ್ತರಿಸಿ ಹತ್ಯೆ ಮಾಡಿದ್ದಾನೆ.
ಶಿವರಾಮ್ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ ಎಂಬುವವರನ್ನು ಮದುವೆಯಾಗಿ, ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮರದ ಮಿಲ್ಲೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವೆ ಆಗಾಗ ಗಲಾಟೆಯೂ ನಡೆಯುತ್ತಿತ್ತು. ಇನ್ನು ಸೋಮವಾರವು ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಇದೇ ವೇಳೆ ಶಿವರಾಮ್ ಪತ್ನಿಯನ್ನು ಅಡುಗೆ ಮನೆಯಲಲೇ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಅಖಲಾಗಿದೆ. ಶಿವರಾಮ್ನನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.