ತುಂಗಭದ್ರಾ ಡ್ಯಾಂನ 19ನೇ ತೂಬಿನಲ್ಲಿ ಗೇಟ್ ಅಳವಡಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ಎರಡನೇ ಪ್ಲಾನ್ ಮಾಡಿಕೊಂಡಿರುವ ತಜ್ಞರು ಇಂದು ಗೇಟ್ ಅಳವಡಿಸುವ ಕಾರ್ಯ ನಡೆಸಲಿದ್ದಾರೆ. ಮೊದಲ ಪ್ರಯತ್ನದಲ್ಲಿ ಜಿಂದಾಲ್ ಕಂಪನಿಯ ಗೇಟ್ ಎಲಿಮೆಂಟ್ನ ಕೊಂಡಿಗಳು 19ನೇ ತೂಬಿನ ಕಲ್ಲಿನ ಪಿಲ್ಲರ್ನ ಕೊಂಡಿಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಹೊಸಳ್ಳಿಯಲ್ಲಿ ಸಿದ್ಧಪಡಿಸಲಾದ ಗೇಟ್ ಎಲಿಮೆಂಟ್ ತಂದಿರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1,625 ಅಡಿ ಎತ್ತರದಲ್ಲಿ ಡ್ಯಾಂ ನೀರು ಇರುವಾಗ ಸ್ಟಾಪ್ ಲಾಗ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ನಿನ್ನೆ ಸ್ಪಾಪ್ ಲಾಗ್ನ ಒಂದು ಎಲಿಮೆಂಟ್ ಅಳವಡಿಸಲು ಆಗಲಿಲ್ಲ. ಮತ್ತೆ 1,621 ಅಡಿಗೆ ನೀರಿನ ಮಟ್ಟ ಬಂದಾಗ ಸ್ಟಾಪ್ ಲಾಗ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಮೊದಲು ಎರಡು ಹಂತದಲ್ಲಿ ಪ್ರಯತ್ನಿಸಲು ತಜ್ಞರು ಚಿಂತಿಸಿದ್ದರು. ಈ ಕುರಿತು ಟಿಬಿ ಬೋರ್ಡ್ನಿಂದ ಸಿಎಂಗೆ ನೀಡಿದ ಮಾಹಿತಿಯಲ್ಲಿ ನಮೂದಿಸಲಾಗಿದೆ. ಇಂದು ಮತ್ತೆ ಗೇಟ್ ಅಳವಡಿಕೆ ಯತ್ನ ನಡೆಸುವ ಸಾಧ್ಯತೆ ಇದೆ.