ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕೆ ಕಮ್ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಬಹುದಿನಗಳ ಬಯಕೆಯಾಗಿತ್ತು. ‘ಯುಐ’ ಸಿನಿಮಾದ ಮೂಲಕ ಉಪ್ಪಿ ಮತ್ತೆ ನಿರ್ದೆಶಕರ ಕ್ಯಾಪ್ ತೊಟ್ಟಿದ್ದಾರೆ. ನೆನ್ನೆ (ಡಿ.20) ಉಪ್ಪಿ ನಿರ್ದೇಶನದ ‘ಯುಐ’ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ಟ್ರೋಲ್ ಸಾಂಗ್ ಮತ್ತು ಟ್ರೇಲರ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರದಲ್ಲಿ ಉಪೇಂದ್ರ ಸಾಕಷ್ಟು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಯುಐ ಸಿನಿಮಾ ಒಪನಿಂಗ್ ಅಲ್ಲಿಯೇ ಈ ಸಿನಿಮಾ ಬುದ್ದಿವಂತರಾಗಿದ್ದರೆ ಈಗಲೇ ಎದ್ದೋಗಿ ಎಂದು ಹೇಳುವ ಧೈರ್ಯ ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ಅವರಿಗೆ ಮಾತ್ರ ಇರೋದು. ಜನರ ತಲೆಗೆ ಹುಳ ಬಿಡುವ ಚಾಲಾಕಿ ನಿರ್ದೇಶಕ ನಮ್ಮ ರಿಯಲ್ ಸ್ಟಾರ್ ಉಪ್ಪಿ..!
ತಮ್ಮ ಸಿನಿಮಾದಲ್ಲಿ ದೇವರನ್ನೇ ಬೈದಿದ್ದ ಉಪೇಂದ್ರ ಇದೀಗ ಸಮಾಜವನ್ನ ತಮ್ಮದೇ ಶೈಲಿಯಲ್ಲಿ ತರಾಟೆಗೆ ತಗೊಂಡಿದ್ದಾರೆ. ಉಪ್ಪಿ ಮುಖ್ಯ ಪಾತ್ರದಲ್ಲಿ ನಟಿಸಿ ಹಾಗೂ ನಿರ್ದೇಶಿಸಿರುವ ಡಿಫರೆಂಟ್ ಸಿನಿಮಾಗೆ ಡಿಫರೆಂಟ್ ರಿವ್ಯೂ ನಿಮ್ಮ ಗ್ರಾರಂಟಿ ನ್ಯೂಸ್ನಲ್ಲಿ.