650 ಸದಸ್ಯ ಬಲದ ಬ್ರಿಟನ್ ಸಂಸತ್ಗೆ ಇಂದು ಚುನಾವಣೆ ನಡೆಯಲಿದೆ. ಕಳೆದ 13 ವರ್ಷಗಳಿಂದ ಆಡಳಿತದಲ್ಲಿರುವ ಕನ್ಸರ್ವೇಟಿವ್ ಪಕ್ಷದ ಹಾಲಿ ಪ್ರಧಾನಿ, ರಾಜ್ಯಸಭಾ ಸಂಸದೆ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಪಾಲಿಗೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.
ಇದುವರೆಗಿನ ಚುನಾವಣಾ ಪೂರ್ವ ಸಮೀಕ್ಷೆಗಳು ವಿಪಕ್ಷ ಲೇಬರ್ ಪಾರ್ಟಿ ಗೆಲುವಿನ ಸುಳಿವು ನೀಡಿವೆ. ಹೀಗಾಗಿ ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ. 650 ಕ್ಷೇತ್ರಗಳಿಗೆ 392 ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಹೊಂದಿದ್ದರೂ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷದ ನಡುವೆ ಹಣಾಹಣಿ ಇದೆ. ಜುಲೈ 5ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 2019 ರಲ್ಲಿ ನಡೆದಿದ್ದ ಕಳೆದ ಚುನಾವಣೆಯಲ್ಲಿ ಭಾರತೀಯ ಮೂಲದ 15 ಜನರು ಸಂಸತ್ಗೆ ಆಯ್ಕೆಯಾಗಿದ್ದರು. ಈ ಬಾರಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ರಿಚಂಡ್ ನಾರ್ಥನ್ಲೈರ್ಟನ್ ಕ್ಷೇತ್ರದಿಂದ ರಿಷಿ ಸುನಕ್ ಕಣಕ್ಕೆ ಇಳಿದಿದ್ದಾರೆ.