ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ವರುಣನ ಅರ್ಭಟ ಜೋರಾಗಿದೆ. ಮಳೆಗಾಲ ಆರಂಭವಾಗುವುದನ್ನೇ ಕಾದು ಕುಳಿತಿದ್ದ ಪ್ರಕೃತಿ ಪ್ರೀಯರಿಗೆ, ಮಳೆಗಾಲ ಸ್ವರ್ಗದಂತೆ ಭಾಸವಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್ಗೆ ಇದೀಗ ಜೀವ ಕಳೆ ಬಂದಿದೆ. ಆದರೆ, ಮೈತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ ನೋಡಲು ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಮಾಡಿ ಬೋರ್ಡ್ ಹಾಕಿದೆ.