ಕಾಲ ಎಲ್ಲಿಗೇ ಬಂತು ದೇವರೆ. ಅದೊಂದ ಕಾಲದಲ್ಲಿ ಗಂಡ ತೀರಿಕೊಂಡ್ರೆ ಗಂಡನ ಜೊತೆ ಹೆಂಡತಿನೂ ಅದೇ ಚಿತೆಯಲ್ಲಿ ಪ್ರಾಣ ಬಿಡ್ತಿದ್ರಂತೆ. ಆದರೆ ಇತ್ತಿಚೀನ ದಿನಮಾನಗಳಲ್ಲಿ ಪವಿತ್ರವಾದ ಸಂಬಂಧಗಳಿಗೆ ಬೆಲೆನೆ ಇಲ್ಲದಂತಾಗಿದೆ. ಕುಟುಂಬ ಅಂದ ಮೇಲೆ ಒಂದ ಮಾತು ಬರುತ್ತೆ, ಒಂದು ಮಾತು ಹೋಗುತ್ತೆ. ಮಾತಲ್ಲಿ ಬಗೆ ಹರಿಸಿದ್ರೆ ಮುಗಿದೋಗುತ್ತೆ ಅಲ್ವಾ. ಈಷ್ಟೆಲ್ಲಾ ಪೀಠಿಕೆ ಯಾಕೆ ಹಾಕತಿದ್ದೀನಿ ಅನ್ಕೋಂಡ್ರಾ. ವಿಷಯ ಇದೇ.. ಇಲ್ಲಿ ದಂಪತಿಯೊಬ್ಬರ ಜಗಳದ ವಿಷಯ, ಕೋರ್ಟ್ ಮೆಟ್ಟಿಲೇರಿರೋ ವಿಚಾರ ಕೇಳಿದ್ರೆ ನೀವು ಪುಲ್ ಶಾಕ್ ಆಗೋಗ್ತಿರಾ..
ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಿಳೆಯೊಬ್ಬಳು ತನ್ನ ಪತಿ 5 ರೂಪಾಯಿ ಕುರ್ಕುರೆ ಚಿಪ್ಸ್ ತರಲಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇದಲ್ಲದೇ ಡಿವೋರ್ಸ್ ಕೊಡಲು ಮುಂದಾಗಿದ್ದಾಳೆ. (ಆಜ್ ತಕ್)ನ ವರದಿಯ ಪ್ರಕಾರ, ನಂತರ ಮಹಿಳೆಯ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಲ್ಗೆ ವರ್ಗಾಯಿಸಲಾಗಿದ್ದು, ಪತಿ-ಪತ್ನಿಯನ್ನು ಕೌನ್ಸೆಲಿಂಗ್ಗಾಗಿ ಸೆಲ್ಗೆ ಕರೆಸಲಾಗಿತ್ತು. ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5 ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ.
ಪತಿ-ಪತ್ನಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿದ ಡಾ.ಸತೀಶ್ ಖೀರವಾರ ಅವರು ಹೇಳುವಂತೆ ವಿವಾಹವಾದ ಕೇವಲ ಒಂದು ವರ್ಷದಲ್ಲೇ ವಿಚ್ಛೇಧನ ನೀಡಲು ಮುಂದಾಗಿದ್ದಾರೆ. ಪತಿ ತನಗೆ ಹೊಡೆಯುತ್ತಾನೆ ಎಂದು ಹೆಂಡತಿ ಹೇಳಿದರೆ, 5 ರೂಪಾಯಿ ಬೆಲೆಯ ಕುರ್ಕುರೆಗೆ ಹೆಂಡತಿ ಜಗಳವಾಡಿದ್ದಾಳೆ. ಕುರ್ಕುರೆ ಸಿಗದಿದ್ದಾಗ ಆಕೆಯ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಪ್ರಕರಣವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.