ಅಣ್ಣ- ತಂಗಿಯರ ಹಬ್ಬ ರಕ್ಷಾ ಬಂಧನ ಬಂದೇ ಬಿಡ್ತು. ದೇಶದೆಲ್ಲೆಡೆ ರಕ್ಷಾ ಬಂಧನವನ್ನು ಅತ್ಯಂತ ಅದ್ದೂರಿಯಿಂದ ನಾವೆಲ್ಲರೂ ಆಚರಣೆ ಮಾಡುತ್ತೇವೆ. ರಾಜ್ಯದಲ್ಲಿ ತಯಾರಾಗುವ ರಾಖಿಗಳಿಗೆ ವಿದೇಶದಲ್ಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹೌದು! ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೌಪರ್ಣಿಕಾ ಅವರು ಹ್ಯಾಂಡ್ಮೆಡ್ ರಾಖಿಗಳ ತಯಾರಿಕೆಯಲ್ಲಿ ನಿಪುಣರು. ಅವರ ರಾಖಿಗಳನ್ನ ನೀವೊಮ್ಮೆ ನೋಡಲೇಬೇಕು. ರಾಮಲಲ್ಲಾ, ಕೃಷ್ಣ, ದೇವಿಯರ ರಾಖಿಗಳೂ ಕೂಡ ಸೌಪರ್ಣಿಕಾ ಅವರು ತಯಾರು ಮಾಡುತ್ತಿದ್ದಾರೆ. ಅಲ್ಲದೇ ಮಿನಿಯನ್ಸ್, ಭೀಮ್, ಡೋರೇಮಾನ್ ಸೇರಿದಂತೆ ಬೇರೆ ಬೇರೆಯ ಕಾರ್ಟೂನ್ ಗಳ ರಾಖಿಯೂ ಕೂಡ ಸ್ವಂತ ತಯಾರಿಸುತ್ತಿದ್ದಾರೆ.
ಈಗ ರಾಮಲಲ್ಲಾ ರಾಖಿಯು ಟ್ರೆಂಡ್ ಆಗುತ್ತಿದೆ. ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದುಬೈ, ಜರ್ಮನಿಯ ಕಸ್ಟಮರ್ಸ್ ಇವರ ರಾಖಿಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತಾರೆ. ತಮ್ಮದೇ “ಕ್ರಾಫ್ಟ್ ಖಝಾನ” ಎಂಬ ಆನ್ಲೈನ್ ವೆಬ್ಸೈಟ್ ಅನ್ನು ಹೊಂದಿರುವ ಇವರು ಹೋಮ್ಮೇಡ್ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದಾರೆ.
ಕಳೆದ 7 ವರ್ಷಗಳಿಂದ ಹೋಮ್ ಮೇಡ್ ರಾಖಿಗಳನ್ನು ಮಣಿಗಳು, ಜರ್ಮನ್ ಸಿಲ್ವರ್ ಇತ್ಯಾದಿಗಳನ್ನು ಉಪಯೋಗಿಸಿ ಬೇರೆ ಬೇರೇ ಥೀಮ್ ನಲ್ಲಿ ಮಾಡುತ್ತಲೇ ಬಂದಿರುವ ಇವರು ತಮ್ಮ ರಾಖಿಯ ಪ್ಯಾಕಿಂಗ್ ಗೆ ಹೆಸರುವಾಸಿ. ಹೀಗಾಗಿ ಅಷ್ಟೇ ಪ್ರಮಾಣದ ಮಾರುಕಟ್ಟೆಯಿದೆ.