ವಂದೇ ಭಾರತ್ ಹೊಸ ರೈಲಿಗೆ ಚಾಲನೆ ನೀಡುವ ವೇಳೆ ನೂಕುನುಗ್ಗಲಿನಿಂದಾಗಿ ಶಾಸಕಿಯೊಬ್ಬರು ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಇತಾವಾದದಲ್ಲಿ ಆಗ್ರಾ ವಾರಾಣಸಿ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್ಎ ಸರಿತಾ ಬದೋರಿಯಾ ಭಾಗಿಯಾಗಿದ್ದರು. ಈ ವೇಳೆ ವಿಪರೀತ ಜನಜಂಗುಳಿ ಇದ್ದ ಕಾರಣ ಕೈಯಲ್ಲಿ ಬಾವುಟ ಹಿಡಿದು ರೈಲಿಗೆ ಚಾಲನೆ ನೀಡುವ ವೇಳೆ ಸರಿತಾ ನೂಕುನುಗ್ಗಲಿನಿಂದಾಗಿ ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದಿದ್ದಾರೆ.
ಸರಿತಾ ರೈಲು ಕಂಬಿಯ ಮೇಲೆ ಬಿದ್ದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಂಥವರನ್ನು ಕೂಡ ಬೆಚ್ಚಿ ಬೀಳಿಸುವಂತಿದೆ. ಶಾಸಕಿ ಸರಿತಾ ಕೆಳಕ್ಕೆ ಬಿದ್ದ ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಭದ್ರತಾ ಸಿಬ್ಬಂದಿ ಹಾಗೂ ಪಕ್ಷದ ಕಾರ್ಯಕರ್ತರು ಅವರಿಗೆ ಸಹಾಯ ನೀಡಿ ಮೇಲೆಕ್ಕೆ ಕರೆದುಕೊಂಡು ಬಂದಿದ್ದಾರೆ.