ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧಿತರಾಗಿರೋ ಆರೋಪಿಗಳಿಂದ ಕೋಟಿ ಕೋಟಿ ಹಣ ಸೀಜ್ ಮಾಡಲಾಗಿದೆ. ಹಣದ ಜೊತೆಗೆ ಐಶಾರಾಮಿ ಕಾರುಗಳನ್ನ ಸೀಜ್ ಮಾಡಿದ್ದಾರೆ ಎಸ್ಐಟಿ ತಂಡ. ಸತ್ಯನಾರಾಯಣ ವರ್ಮಾ ಬಳಿ 8.2 ಕೋಟಿ ನಗದು ಸೀಜ್ ಆಗಿದ್ರೆ, 3ಕೋಟಿ ಬೆಲೆಯ ಲ್ಯಾಂಬರ್ಗನಿ ಉರುಸ್, 1.2ಕೋಟಿಯ ಬೆಂಜ್ ಕಾರುನ್ನ ಸೀಜ್ ಮಾಡಲಾಗಿದೆ. ಸೀಜ್ ಮಾಡಿರೋ ಕಾರುಗಳನ್ನ ಹೈದರಾಬಾದ್ ನಲ್ಲಿ ಇಟ್ಟಿದ್ದು ಹಣ ಕೊಟ್ಟು ಕಾರುಗಳನ್ನ ಬಿಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಎಂ ಡಿ ಪದ್ಮನಾಭ – 3.92ಕೋಟಿ ಸೀಜ್ ಮಾಡಲಾಗಿದೆ. ನಾಗೇಶ್ವರ ರಾವ್ – 1.5 ಕೋಟಿ ಸೀಜ್ ಆಗಿದೆ, ಚಂದ್ರಮೋಹನ್ – 30ಲಕ್ಷ, ಜಗದೀಶ್ – 15 ಲಕ್ಷ ಹಣ ಸೀಜ್ ಆಗಿದೆ. ಇನ್ನೂ ಸತ್ಯನಾರಾಯಣ ಇಟಕಾರಿ ಅಕೌಂಟ್ ನಲ್ಲಿ 7 ಕೋಟಿ ಫ್ರೀಜ್ ಆಗಿದ್ದು ಈ ಹಣವನ್ನು ಸೀಜ್ ಮಾಡಲು ಕೋರ್ಟ್ ಮೊರೆ ಹೋಗಿದ್ದಾರೆ. ತೇಜ ಕಮಿಷನ್ ರೂಪದಲ್ಲಿ ಪಡೆದಿರೋ ಒಂದು ಕೋಟಿ ಹಣವನ್ನ ವಾಪಸ್ ನೀಡಲು ಒಪ್ಪಿಕೊಂಡಿದ್ದಾರೆ. ಸದ್ಯ ಇದುವರೆಗೆ 35 ಕೋಟಿಗೂ ಹೆಚ್ಚು ಹಣ ಸೀಜ್ ಮಾಡಿರೋ ಎಸ್ಐಟಿ, ಮುಖ್ಯವಾಗಿ ಬೇರೆ ಬೇರೆ ಅಕೌಂಟ್ ಗೆ ವರ್ಗಾವಣೆಯಾಗಿದ್ದ ಸುಮಾರು 2 ಕೋಟಿಯಷ್ಟು ಹಣ ನಿಗಮದ ಅಕೌಂಟ್ ಗೆ ವಾಪಸ್ ಬಂದಿದೆ. ಇನ್ನೂ 15- 20ಕೋಟಿ ಹಣ ರಿಕವರಿಯಾಗುವ ನಿರೀಕ್ಷೆಯಲ್ಲಿ ಎಸ್ಐಟಿ ಅಧಿಕಾರಿಗಳಿದ್ದಾರೆ.