ವಾಲ್ಮೀಕಿ ಹಗರಣದ ಉರುಳು ಸುತ್ತಿಕೊಂಡಿರುವ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ರೇಡ್ ಆಗಿರುವ ಬಗ್ಗೆ ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಮೊದಲು ಎಸ್ಐಟಿ ಮೇಲೆ ನಂಬಿಕೆ ಇತ್ತು ಆದರೆ ಈಗ ಅವರ ಮೇಲೆ ನಂಬಿಕೆ ಇಲ್ಲ ಈಗಾಗಲೇ ಈ ಪ್ರಕರಣದಲ್ಲಿ ನಾಗೇಂದ್ರ, ಬಸನಗೌಡ ದದ್ದಲ್ ಅರೆಸ್ಟ್ ಆಗಬೇಕಿತ್ತು. ಸರ್ಕಾರದ ಒತ್ತಡದಿಂದ ಎಸ್ಐಟಿ ಉದಾಸೀನ ತೋರಿದೆ. ಈ ಪ್ರಕರಣವನ್ನ ರಾಜ್ಯ ಸರ್ಕಾರ ಮುಚ್ಚಿ ಹಾಕಲು ಹೊರಟಿದೆ ಎಂದು ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ದಲಿತರ ಹಣವನ್ನ ಕಬಳಿಸಿರುವವರಿಗೆ ಖಂಡಿತ ಶಿಕ್ಷೆ ಆಗಬೇಕು. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು. ವಾಲ್ಮೀಕಿ ಹಗರಣದ ಪಾರದರ್ಶಕವಾದ ತನಿಖೆಗಾಗಿ ನಮ್ಮ ಬಿಜೆಪಿ ಪಕ್ಷ ಹೋರಾಟ ಮಾಡುತ್ತಿದೆ. ಈ ಪ್ರಕರಣವನ್ನ ಮುಚ್ಚಿ ಹಾಕಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.