- ಮತ್ತೆ ಗೆದ್ದ ಜೈಭೀಮ್ ಡೈರೆಕ್ಟರ್
- ಕಾನೂನು ವ್ಯವಸ್ಥೆಯ ಇಣುಕುನೋಟ ತಲೈವಾ ವೆಟ್ಟೈಯಾನ್
- ಗ್ಯಾರಂಟಿ ನ್ಯೂಸ್ ರೇಟಿಂಗ್ 3.5/5
ತಲೈವಾ ರಜನೀಕಾಂತ್ಗೆ ಇರೋ ಸಿನಿಮೋತ್ಸಾಹ ಇಂದಿನ ಯಂಗ್ಸ್ಟರ್ಗಳನ್ನೂ ನಾಚಿಸುವಂಥದ್ದು. ವರ್ಷಕ್ಕೆ ಕನಿಷ್ಟ ಎರಡೆರಡು ಸಿನಿಮಾ ಮಾಡೋ ಈ ಸಿನಿಸಂತ, ಈ ವರ್ಷ ಕೂಡ ಎರಡು ಸಿನಿಮಾ ನೀಡಿದ್ದಾರೆ. ಲಾಲ್ ಸಲಾಂ ಬಳಿಕ ರಜನಿಯ ಬಹುನಿರೀಕ್ಷಿತ ಚಿತ್ರ ವೆಟ್ಟೈಯಾನ್ ಇಂದು ವರ್ಲ್ಡ್ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಹಾಗಾದ್ರೆ ಸಿನಿಮಾ ಹೇಗಿದೆ..? ಬಹುಭಾಷಾ ಸ್ಟಾರ್ಗಳ ಪರ್ಫಾಮೆನ್ಸ್ ಹೇಗಿದೆ..? ಕಥೆ ಏನು..? ಜ್ಞಾನವೇಲ್ ಈ ಬಾರಿ ಮಾಡಿರೋ ಎಕ್ಸ್ಪೆರಿಮೆಂಟ್ ಆದ್ರೂ ಎಂಥದ್ದು ಅಂತೀರಾ..? ನಮ್ಮ ಗ್ಯಾರಂಟಿ ನ್ಯೂಸ್ನ ಈ ಹಾನೆಸ್ಟ್ ರಿವ್ಯೂ ಒಮ್ಮೆ ಓದಿ.
ವೆಟ್ಟೈಯಾನ್ ಕಥಾಹಂದರ:
ಕನ್ಯಾಕುಮಾರಿಯಲ್ಲಿ ಶರಣ್ಯ(ದುಷಾರಾ ವಿಜಯನ್) ಅನ್ನೋ ಶಾಲಾ ಶಿಕ್ಷಕಿ, ತಮ್ಮ ಶಾಲೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗಾಂಜಾ ಕುರಿತು ಎಸ್ಪಿ ಅಥಿಯಾನ್(ರಜನೀಕಾಂತ್)ಗೆ ಪತ್ರ ಬರೆಯುತ್ತಾಳೆ. ಅದನ್ನ ಭೇದಿಸೋ ಮೂಲಕ ಅದ್ರ ರೂವಾರಿ ಆದ ರೌಡಿ ಶೀಟರ್ನ ಎನ್ಕೌಂಟರ್ ಮಾಡ್ತಾರೆ ಎನ್ಕೌಂಟರ್ ಸ್ಪೆಷಲಿಸ್ಟ್ ಅಂತಲೂ ಹೆಸರಾಗಿದ್ದ ನಾಯಕನಟ ಅಥಿಯಾನ್. ಶಿಕ್ಷಕಿಯ ಧೈರ್ಯ ಮೆಚ್ಚಿ ಮುಂದೆಯೂ ಇಂಥದ್ದೇ ಕಾರ್ಯಗಳನ್ನ ಮಾಡುವಂತೆ ಬೆನ್ನು ತಟ್ಟುತ್ತಾರೆ. ಅಷ್ಟರಲ್ಲೇ ಆ ಶಿಕ್ಷಕಿ ಚೆನ್ನೈಗೆ ಟ್ರಾನ್ಸ್ಫರ್ ಪಡೆಯುತ್ತಾರೆ. ಮತ್ತೊಂದೆಡೆ ನಿವೃತ್ತ ನ್ಯಾಯಾಧೀಶರಾದ ಸತ್ಯದೇವ್ ಬ್ರಹ್ಮದತ್ ಪಾಂಡೆ(ಅಮಿತಾಬ್ ಬಚ್ಚನ್) ಸಮಾಜದಲ್ಲಿ ಹೀರೋಗಳು ಆಗೋಕೆ ಕೆಲ ಪೊಲೀಸರು ಎನ್ಕೌಂಟರ್ ಸ್ಪೆಷಲಿಸ್ಟ್ಗಳಾಗಿ ಗುರ್ತಿಸಿಕೊಳ್ತಾರೆ. ಬೇಗ ಕೇಸ್ನ ಕ್ಲೋಸ್ ಮಾಡೋ ಭರದಲ್ಲಿ ತಪ್ಪು ಮಾಡದವರನ್ನ ಸಹ ಎನ್ಕೌಂಟರ್ ಹೆಸರಲ್ಲಿ ಮರ್ಡರ್ ಮಾಡ್ತಾರೆ ಅಂತ ಹ್ಯೂಮನ್ ರೈಟ್ಸ್ ಪರ ಹೋರಾಡ್ತಾರೆ. ಕಳ್ಳನಾದ ಪ್ಯಾಟ್ರಿಕ್ ಅಲಿಯಾಸ್ ಬ್ಯಾಟರಿ(ಫಹಾದ್ ಫಾಸಿಲ್)ಯನ್ನ ತಮ್ಮ ಕೇಸ್ಗಳನ್ನ ಭೇದಿಸಲು ಟೆಕ್ನಿಷಿಯನ್ ಆಗಿ ಬಳಸಿಕೊಳ್ತಾರೆ ಎಸ್ಪಿ. ಈ ಮಧ್ಯೆ ಎಸ್ಪಿಗೆ ಆ ಶಿಕ್ಷಕಿ ಎರಡು ಮೂರು ಬಾರಿ ಕರೆ ಮಾಡ್ತಾರೆ. ಕರೆ ಸ್ವೀಕರಿಸಲಾಗದ ಎಸ್ಪಿಗೆ ಆ ಶಿಕ್ಷಕಿ ರೇಪ್ ಅಂಡ್ ಮರ್ಡರ್ ಆಗಿರೋದು ನ್ಯೂಸ್ ಮೂಲಕ ಗೊತ್ತಾಗಲಿದೆ. ಶಿಕ್ಷಕಿಯ ಕೊಲೆ ಕೇಸ್ ಭೇದಿಸಲು ಎಎಸ್ಪಿ ರೂಪಾ(ರಿತಿಕಾ ಸಿಂಗ್) ಹಾಗೂ ಎಸ್ಪಿ ಹರೀಶ್ ಕುಮಾರ್(ಕಿಶೋರ್) ಮುಂದಾಗ್ತಾರೆ. ಕೊನೆಗೆ ಅವರು ಕೇಸ್ನ ಭೇದಿಸಲು ಅಸಮರ್ಥರು ಅಂತ ತಿಳಿದಾಗ, ಅದನ್ನ ಕನ್ಯಾಕುಮಾರಿ ಎಸ್ಪಿಗೇ ವಹಿಸುತ್ತಾರೆ DGP. ಆಗ ಸ್ಲಮ್ನಲ್ಲಿ ಓದಿಕೊಂಡಿರೋ ಗುಣ ಅನ್ನೋ ಒಬ್ಬ ಹುಡ್ಗನನ್ನ ಎನ್ಕೌಂಟರ್ ಮಾಡಿ ಸಾಯಿಸ್ತಾರೆ ಪೊಲೀಸರು. ಆಗ ನಿವೃತ್ತ ನ್ಯಾಯಾಧೀಶರಾದ ಸತ್ಯದೇವ್ ಇದೊಂದು ಫೇಕ್ ಎನ್ಕೌಂಟರ್ ಅಂತ ಪ್ರೂವ್ ಮಾಡಲು ಮುಂದಾಗ್ತಾರೆ. ಇಷ್ಟಕ್ಕೂ ಸತ್ತವನೇ ಅಪರಾಧಿನಾ ಅಥ್ವಾ ಬೇರಾರು ಅಸಲಿ ಅಪರಾಧಿ ಅನ್ನೋದೇ ಅಸಲಿ ಕಥೆ.
ವೆಟ್ಟೈಯಾನ್ ಆರ್ಟಿಸ್ಟ್ ಪರ್ಫಾಮೆನ್ಸ್:
- ತಲೈವಾ ಎನರ್ಜಿ ಫಾಸ್ಟ್ & ಫ್ಯೂರಿಯೆಸ್- ರಜನೀಕಾಂತ್ ನಟನೆ, ಹಾವ, ಭಾವ, ಯುನಿಕ್ ಸ್ಟೈಲ್ ನೋಡುಗರಿಗೆ ಎಂದಿನಂತೆ ಕಿಕ್ ಕೊಡಲಿದೆ. ಇಳಿವಯಸ್ಸಿನಲ್ಲಿ ಅವ್ರ ಆಕ್ಷನ್ ಸೀಕ್ವೆನ್ಸ್ ನೋಡೋಕೆ ಮಜಭೂತಾಗಿವೆ. ವಯಸ್ಸಿಗೆ ತಕ್ಕ ಪಾತ್ರ ಮಾಡಿರೋ ಅವರಿಗೆ ಮಂಜು ವಾರಿಯರ್ ಪತ್ನಿಯಾಗಿ ಸಾಥ್ ನೀಡಿದ್ದಾರೆ.
- ಬ್ಯಾಟರಿಯಾಗಿ ಫಹಾದ್ ಫಾಸಿಲ್ ನಟನೆ ಚಿತ್ರದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಲಿದೆ. ಅವ್ರ ಕಾಮಿಡಿ ಟೈಂ, ರಜನಿ ಬಲಗೈ ಬಂಟನಂತೆ ಸದಾ ಜೊತೆಗಿರೋ ಫಹಾದ್, ಒಳ್ಳೆಯ ಕಳ್ಳನಾಗಿ ಖಾಕಿಗೆ ಉಪಯೋಗವಾಗೋ ಹ್ಯಾಕರ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
- ಬಿಗ್ಬಿ ಅಮಿತಾಬ್ ಬಚ್ಚನ್ ನಿವೃತ್ತ ನ್ಯಾಯಾಧೀಶರಾಗಿ ಫೇಕ್ ಎನ್ಕೌಂಟರ್ಗಳ ವಿರುದ್ಧ ಧ್ವನಿ ಎತ್ತುವಂತಹ ತೂಕವಾದ ಪಾತ್ರಕ್ಕೆ ನಿಜಕ್ಕೂ ಒಂದು ತೂಕ ತಂದುಕೊಟ್ಟಿದ್ದಾರೆ.
- ಇನ್ನು ರಾಣಾ ದಗ್ಗುಬಾಟಿ ನಟರಾಜ್ ಅನ್ನೋ ಬ್ಯುಸಿನೆಸ್ಮ್ಯಾನ್ ಪಾತ್ರದಲ್ಲಿ ಖಡಕ್ ಖಳನಾಯಕನಾಗಿ ಮಿಂಚಿದ್ದಾರೆ. ಪೊಲೀಸ್ ಆಫೀಸರ್ಗಳಾಗಿ ರಿತಿಕಾ ಸಿಂಗ್ ಹಾಗೂ ಕಿಶೋರ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದರಲ್ಲೂ ರಿತಿಕಾ ಗ್ಲಾಮರ್ ಕಾಪ್ ಆಗಿ ನೋಡುಗರ ಕಣ್ಣು ತಂಪಾಗಿಸುತ್ತಾರೆ.
- ಅಲ್ಲದೆ, ದುಷಾರಾ ವಿಜಯನ್ ಒಬ್ಬ ಸಾಮಾನ್ಯ ಶಿಕ್ಷಕಿಯಾಗಿ ತುಂಬಾ ಚಾಲೆಂಜಿಂಗ್ ಪಾತ್ರ ಮಾಡಿದ್ದಾರೆ. ರಾವು ರಾಮೇಶ್, ಅಭಿರಾಮಿ ಸೇರಿದಂತೆ ದೊಡ್ಡ ತಾರಾಗಣವಿದ್ದು, ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ವೆಟ್ಟೈಯಾನ್ ಪ್ಲಸ್ ಪಾಯಿಂಟ್ಸ್:
- ಜ್ಙಾನವೇಲ್ ಕಥೆ, ಚಿತ್ರಕಥೆ & ನಿರ್ದೇಶನ
- ತಲೈವಾ ರಜನಿ, ಫಹಾದ್ & ರಾಣಾ ನಟನೆ
- ಪೊಲೀಸರು ಬೇಟೆಗಾರರಲ್ಲ, ರಕ್ಷಕರು ಅನ್ನೋ ಕಾನ್ಸೆಪ್ಟ್
- ಅನಿರುದ್ದ್ ರವಿಚಂದರ್ ಹಿನ್ನೆಲೆ ಸಂಗೀತ
- ಲೈಕಾ ಪ್ರೊಡಕ್ಷನ್ಸ್ ರಿಚ್ ಪ್ರೊಡಕ್ಷನ್
ವೆಟ್ಟೈಯಾನ್ ಮೈನಸ್ ಪಾಯಿಂಟ್ಸ್:
ಮೊದಲಾರ್ಧವನ್ನ ಕ್ರಿಸ್ಪಿಯಾಗಿ ಕಟ್ಟಿಕೊಟ್ಟಿರೋ ನಿರ್ದೇಶಕರು, ದ್ವಿತಿಯಾರ್ಧ ಕೊಂಚ ಲ್ಯಾಗ್ ಮಾಡಿದ್ದಾರೆ. ಸಿನಿಮಾದ ರನ್ ಟೈಂ ಬರೋಬ್ಬರಿ ನೂರ ಅರವತ್ತ ಮೂರೂವರೆ ನಿಮಿಷಗಳಿದೆ. ಹಾಗಾಗಿ ನೋಡುಗರ ತಾಳ್ಮೆ ಪರೀಕ್ಷಿಸಲಿದೆ.
ವೆಟ್ಟೈಯಾನ್ಗೆ ಗ್ಯಾರಂಟಿ ನ್ಯೂಸ್ ರೇಟಿಂಗ್: 3.5/5
ವೆಟ್ಟೈಯಾನ್ ಫೈನಲ್ ಸ್ಟೇಟ್ಮೆಂಟ್:
ಟಿಜೆ ಜ್ಙಾನವೇಲ್.. ಈ ಹಿಂದೆ ಜೈಭೀಮ್ ಅನ್ನೋ ಸಿನಿಮಾ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸೆನ್ಸಿಬಲ್ ಡೈರೆಕ್ಟರ್. ಈ ಬಾರಿಯೂ ಕೂಡ ಅಂಥದ್ದೇ ಸೂಕ್ಷ್ಮಾತಿಸೂಕ್ಷ್ಮ ಕಥೆಯನ್ನ ಬಹಳ ಸೊಗಸಾಗಿ ಬಿಗ್ಸ್ಕ್ರೀನ್ಗೆ ತರುವಲ್ಲಿ ಯಶಸ್ವಿ ಆಗಿದ್ದಾರೆ. ಅದರಲ್ಲೂ ಪೊಲೀಸ್ ವ್ಯವಸ್ಥೆಯಲ್ಲಿನ ಎನ್ಕೌಂಟರ್, ಅದನ್ನ ವಿರೋಧಿಸುವ ಹ್ಯೂಮನ್ ರೈಟ್ಸ್ ಹಾಗೂ ಸಮಾಜದ ಮೇಲೆ ಅದರ ಪ್ರಭಾವಗಳನ್ನ ಎಳೆ ಎಳೆಯಾಗಿ ಬಿಚ್ಚಿಡೋ ಯತ್ನ ವ್ಹಾವ್ ಫೀಲ್ ತರಿಸುತ್ತೆ. ಈ ಸಿನಿಮಾದ ಕಥೆ ನಮ್ಮ ಸುತ್ತಮುತ್ತಲು ನಡೆದಿರೋ ಒಂದಷ್ಟು ಘಟನೆಗಳನ್ನ ನೆನಪಿಸುವಂತಿದೆ. ಅದೇನೇ ಇರಲಿ, ಜೈ ಭೀಮ್ ಮಾಡಿದ್ದ ಡೈರೆಕ್ಟರ್ ರಜನೀಕಾಂತ್, ಅಮಿತಾಬ್, ಫಹಾದ್, ರಾಣಾ ಅಂತಹ ದೊಡ್ಡ ಸ್ಟಾರ್ಗಳನ್ನ ಇಟ್ಕೊಂಡು ಕಮರ್ಷಿಯಲಿ ಏನು ಮಾಡ್ತಾರೋ ಅಂತ ಕಾಯ್ತಿದ್ದ ಪ್ರೇಕ್ಷಕರನ್ನ ನಿರಾಸೆ ಅಂತೂ ಮಾಡಿಲ್ಲ. ಸೋ.. ದಸರಾ ಹಬ್ಬದ ವೆಕೇಷನ್ ಮೂಡ್ನಲ್ಲಿರೋರಿಗೆ ಥಿಯೇಟರ್ ಹೋಗಿ ಸಿನಿಮಾ ನೋಡ್ಬೇಕಂದ್ರೆ ಇದೊಂದು ಬೆಸ್ಟ್ ಚಾಯ್ಸ್ ಆಗಲಿದೆ.