ಸಾಮಾನ್ಯವಾಗಿ ಜನರು ಊಟಕ್ಕೆ ರೋಟಿ, ಚಪಾತಿ ಮತ್ತು ಪರೋಟಾಗಳನ್ನ ತಿನ್ನುತಾರೆ. ಇದನ್ನ ಬೆಣ್ಣೆ, ತುಪ್ಪ ಹಾಗೂ ಎಣ್ಣೆ ಇಂದ ಮಾಡಲಾಗುತ್ತೆ. ಆದ್ರೆ ಚಂಡೀಗಢ ಢಾಬಾ ಒಂದರಲ್ಲಿ ಡಿಸೇಲ್ ಪರೋಟ ಮಾಡುತ್ತ ಇದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@nebula_world ಅನ್ನೋ X ಖಾತೆಯಲ್ಲಿ ಡೀಸೆಲ್ ಪರೋಟ ಮಾಡುವ ವಿದಾನವನ್ನ ಶೇರ್ ಮಾಡಿದ್ದಾರೆ. ಈ ವಿಡಿಯೋ ದಲ್ಲಿ ಅಡಿಗೆ ಮಾಡುವವ ಆಲೂ ಪರೋಟ ಮಾಡುತ್ತ ತವ ಮೇಲೆ ಹಾಕಿ ಬೆಯುತ್ತಿದ್ದ ಪರೋಟಗೆ ಎಣ್ಣೆ, ತುಪ್ಪದ ಬದಲು ಡೀಸೆಲ್ ಸುರಿದ್ದಿದಾನೆ. ಇದು ಡೀಸೆಲ್ ಮಿಕ್ಸ್ ಪರೋಟ ಎಂದು ಇಡಿ ಪರೋಟವನ್ನ ಡೀಸೆಲ್ ನಲ್ಲಿ ತಯಾರಿಸಿದ್ದಾನೆ. ಈ ಭಯಾನಕ ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದನ್ನು ತಿಂದರೆ ಕ್ಯಾನ್ಸರ್ ಬರೋದು ಖಚಿತ ಎಂದು ನೆಟ್ಟಿಜನ್ ಕಾಮೆಂಟ್ ಮಾಡಿದ್ದಾರೆ.