- ವರ್ಲ್ಡ್ ಫೇಮಸ್ ಲವ್ವರ್ ವಿಜಯ್ ದೇವರಕೊಂಡ ಬರ್ತ್ ಡೇ ಸಂಭ್ರಮ
- ರಕ್ತ ಸಿಕ್ತ ಪೋಸ್ಟರ್ ಜೊತೆ ಕೆಂಡದಂತಹ ಡೈಲಾಗ್ ರಿವೀಲ್ ಮಾಡಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯ ಫೇಮಸ್ ಕಿಸ್ಸಿಂಗ್ ಸ್ಟಾರ್, ವರ್ಲ್ಡ್ ಫೇಮಸ್ ಲವ್ವರ್ ವಿಜಯ್ ದೇವರಕೊಂಡ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 34ನೇ ವರ್ಷದ ಹುಟ್ಟುಹಬ್ಬದ ಸಂತಸದಲ್ಲಿರೋ ರೌಡಿಬಾಯ್, ಕತ್ತಿ ನಾನೇ...ರಕ್ತ ನನ್ನದೇ... ಯುದ್ಧ ನನ್ನೊಂದಿಗೆ... ಬೆಂಕಿ ಡೈಲಾಗ್ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ, ಲೈಗರ್ ಈ ಡೈಲಾಗ್ ಬಿಟ್ಟಿರೋದು ಸಿನಿಮಾಗಾಗಿ ಅನ್ನೋದು ವಿಶೇಷ. ರೌಡಿ ಬಾಯ್ ಬರ್ತ್ ಡೇ ಸ್ಪೆಷಲ್ಲಾಗಿ ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಪ್ಲಸ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಫ್ಯಾಮಿಲಿ ಸ್ಟಾರ್ ನಂತರ ನಿರ್ಮಾಪಕ ದಿಲ್ ರಾಜು ವಿಜಯ್ ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಸದ್ಯಕ್ಕೆ, ಎಸ್ ವಿ ಸಿ 59 ಅಂತ ಟೆಂಟಟೀವ್ ಟೈಟಲ್ ನೀಡಲಾಗಿದ್ದು, ರಕ್ತ ಸಿಕ್ತ ಪೋಸ್ಟರ್ ಜೊತೆ ಕೆಂಡದಂತಹ ಡೈಲಾಗ್ ರಿವೀಲ್ ಮಾಡಿದ್ದಾರೆ. ಈ ಚಿತ್ರಕ್ಕೆ ರವಿ ಕಿರಣ್ ಕೋಲ ಆಕ್ಷನ್ ಕಟ್ ಹೇಳಿದ್ದು, ದಿಲ್ ರಾಜು ಹಾಗೂ ಸಿರೀಶ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲೆಯಾಳಂನಲ್ಲಿ ಈಹೈವೋಲ್ಟೇಜ್ ಆಕ್ಷನ್ ಸಿನಿಮಾ ತಯಾರಾಗಲಿದೆ.
SVC-59 ಜೊತೆಗೆ ವಿಜಯ್ ಬರ್ತ್ ಡೇಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಲಾಗಿದೆ. ಇದು ವಿಜಯ್ ಅಭಿನಯದ 14 ನೇ ಚಿತ್ರ. ಶ್ಯಾಮ್ ಸಿಂಗ್ ರಾಯ್ ಸಿನಿಮಾ ಖ್ಯಾತಿಯ ರಾಹುಲ್ ಸಂಕ್ರಿತ್ಯಾನ್ ಡೈರೆಕ್ಟ್ ಮಾಡ್ತಿರುವ, ನವೀನ್ ಯರನೇನಿ, ರವಿಶಂಕರ್ ಕೂಡಿ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, 1854 ರಿಂದ 1878 ರ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರೀಕರಣ ನಡೆಯಲಿದೆ.
ಈ ಎರಡು ಸಿನಿಮಾಗಳಿಗೂ ಮೊದಲು ವಿಜಯ್ ‘VD 12’ ಚಿತ್ರ ಕೈಗೆತ್ತಿಕೊಳ್ತಿದ್ದಾರೆ. ಜೆರ್ಸಿ ಡೈರೆಕ್ಟರ್ ಗೌತಮ್ ತಿನೌರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ‘ಪ್ರೇಮಲು’ನಟಿ ಮಮಿತಾ ಬೈಜು ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಹೀಗೆ, ವಿಜಯ್ ಕೈಯಲ್ಲಿ 3 ಸಿನಿಮಾಗಳಿವೆ. ಈ ಮೂರು ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಈ ಮೂರು ಸಿನಿಮಾಗಳಲ್ಲಿ ರೌಡಿಬಾಯ್ ನ ಯಾವ ಸಿನಿಮಾ ಕೈ ಹಿಡಿಯುತ್ತೋ ಗೊತ್ತಿಲ್ಲ.
ಗೀತಾ ಗೋವಿಂದಂ ಸಿನಿಮಾ ನಂತರ ಹತ್ತಾರು ಸಿನಿಮಾ ಮಾಡಿದ್ರೂ ಕೂಡ ವಿಜಯ್ ಗೆ ಸಕ್ಸಸ್ ಕೈ ಹಿಡಿಯುತ್ತಿಲ್ಲ. ಬಿಗ್ ಬ್ರೇಕ್ ಸಿಕ್ಕಿಲ್ಲ. ಹೀಗಾಗಿ, ಲೈಗರ್ ಗೆ ದೊಡ್ಡ ಬ್ರೇಕ್ ಬೇಕಾಗಿದೆ. ಮಾಡಿದ ಸಿನಿಮಾಗಳು ಕೈಹಿಡಿಯಬೇಕಿದೆ.