ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇದೇ ವರ್ಷದ ಜೂನ್ 11 ರಂದು ಮೈಸೂರಿನಲ್ಲಿ ಅರೆಸ್ಟ್ ಆಗಿದ್ದರು. ಆ ನಂತರದಲ್ಲಿ ಅನಾರೋಗದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದುಕೊಂಡು ಆಚೆ ಬಂದಿದ್ದರು. ಮತ್ತು ನಂತರದ ದಿನಗಳಲ್ಲಿ ಪೂರ್ಣ ಪ್ರಮಾಣದ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇದರ ಬೆನ್ನಲ್ಲೇ ಅವರ ಪತ್ನಿ ವಿಜಯಲಕ್ಷ್ಮಿ ಈ ವರ್ಷ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ದರ್ಶನ್ ಈ ವರ್ಷ ಕಲಿತ ಪಾಠದ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
“ಬದಲಾವಣೆ ಭಯಾನಕವಾಗಿರತ್ತೆ, ಆದರೆ ಬದಲಾವಣೆಯೇ ಮುಂದೆ ಬೆಳವಣಿಗೆಗೆ ದಾರಿ
ನೋವು ಜನರನ್ನು ಬದಲಾಯಿಸುತ್ತದೆ
ನಾವು ಒಂದು ಪ್ಲ್ಯಾನ್ ಮಾಡಿದರೆ, ದೇವರ ಪ್ಲ್ಯಾನ್ ಬೇರೆದಾಗಿರತ್ತೆ.
ಜೀವನವು ನೆನಪುಗಳ ಸಂಗ್ರಹವಲ್ಲದೆ ಬೇರೇನೂ ಅಲ್ಲ.
ಕನ್ನಡಿ ನನ್ನ ಉತ್ತಮ ಸ್ನೇಹಿತ ಏಕೆಂದರೆ ನಾನು ಅತ್ತಾಗ, ಅದು ನನ್ನ ನೋಡಿ ಎಂದಿಗೂ ನಗುವುದಿಲ್ಲ.
ನೀರು ತುಂಬಾ ಐಷಾರಾಮಿ ಅಲ್ಲ ಆದರೆ ಜೀವನಕ್ಕೆ ತುಂಬ ಮೌಲ್ಯಯುತವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಹುಳುವೊಂದು ಚಿಟ್ಟೆಯಾಗಿ ಹಾರುವ ಚಿತ್ರವನ್ನು ಹಂಚಿಕೊಂಡಿದ್ದು, ‘ಬದಲಾವಣೆ ಭಯ ‘ಹುಟ್ಟಿಸುತ್ತದೆ ಆದರೆ ಬದಲಾವಣೆಯೇ ಬೆಳವಣಿಗೆ’ ಎಂದಿದ್ದಾರೆ. ಸಾಧಾರಣ ಹುಳದಂತೆ ತಮಗೆ ತಾವು ಗಡಿ ಹಾಕಿಕೊಂಡು ಇದ್ದ ವಿಜಯಲಕ್ಷ್ಮಿ ಈ ವರ್ಷ, ದರ್ಶನ್ ಪ್ರಕರಣದ ನಂತರ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಗಡಿಗಳನ್ನು ದಾಟಿ ಹೊರಗೆ ಬಂದಿದ್ದಾರೆ. ಇದೇ ಕಾರಣಕ್ಕೆ ಈ ಚಿತ್ರ ಹಾಗೂ ಸಾಲುಗಳನ್ನು ವಿಜಯಲಕ್ಷ್ಮಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀವು ಒಂದು ಮುದುಡಿದ ಹೂವು ಆಗಿ ಇದ್ದುಬಿಡುವ ಆಲೋಚನೆಯಲ್ಲಿರುತ್ತೀರಿ, ಆದರೆ ದೇವರು ನಿಮ್ಮನ್ನು ಹೂಗುಚ್ಛವನ್ನೇ ಮಾಡುವ ಆಲೋಚನೆಯಲ್ಲಿರುತ್ತಾರೆ ಎಂದಿರುವ ವಿಜಯಲಕ್ಷ್ಮಿ, ಸದಾ ದೇವರ ಯೋಜನೆಯೇ ಕಾರ್ಯರೂಪಕ್ಕೆ ಬರುತ್ತದೆ ಎಂಬರ್ಥ ಮೂಡುವ ಪೋಸ್ಟ್ ಹಂಚಿಕೊಂಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ ಬಳಿಕ ವಿಜಯಲಕ್ಷ್ಮಿ ಜವಾಬ್ದಾರಿ ತೆಗೆದುಕೊಂಡು ತಾವೇ ಮುಂದೆ ನಿಂತು ಎಲ್ಲೆಡೆ ಓಡಾಡಿ ವಕೀಲರ ಭೇಟಿಯಾಗಿ ದರ್ಶನ್ಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ದರ್ಶನ್ ಜೈಲಿನಲ್ಲಿ ಇರುವಷ್ಟು ಸಮಯ ಸಾಕಷ್ಟು ಸವಾಲುಗಳನ್ನು ಅವರು ಹೊರಗೆ ಅನುಭವಿಸಿದ್ದಾರೆ. ಅದರಿಂದ ಸಾಕಷ್ಟು ಪಾಠಗಳನ್ನು ಅವರು ಕಲಿತಿದ್ದಾರೆ ಎಂದು ಈ ವರ್ಷ ಕಲಿತ ಪಾಠದ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.