ಗೋಧ್ರಾ ರೈಲು ದುಂರಂತ ಹಿಂದಿನ ಕತೆ ಆಧಾರಿತ `ಸಬರಮತಿ ರಿಪೋರ್ಟ್’ ಸಿನಿಮಾ ಬಹು ದಿನಗಳಿಂದ ತುಂಬಾ ಹೆಸರು ಮಾಡಿತ್ತು. ಇದಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಟ ವಿಕ್ರಾಂತ್ ಜೊತೆ ಸಿನಿಮಾ ವೀಕ್ಷಿಸಿದ್ದರು . ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ವಿಕ್ರಾಂತ್ ಮಾಸ್ಸೆ ತಮ್ಮ ಸಿನಿ ಕೆರಿಯರ್ ಗೆ ವಿದಾಯ ಹೇಳಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿತ್ತು ಇದೀಗ ವಿಕ್ರಾಂತ್ ಶಾಶ್ವತವಾಗಿ ನಿವೃತ್ತಿ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಜನರು ತಮ್ಮ ಹೇಳಿಕೆಯನ್ನು ತಪ್ಪಾಗಿ ಓದಿದ್ದಾರೆ ಹಾಗೂ ನಾನು ನಿವೃತ್ತಿಯಾಗುತ್ತಿಲ್ಲ ಎಂದು ವಿಕ್ರಾಂತ್ ಮಾಸ್ಸೆ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.