ಚಹಾಪ್ರಿಯರು ಸಾಮಾನ್ಯವಾಗಿ ಚೆನ್ನಾಗಿ ಬೇಯಿಸಿ, ಕುದಿಸಿ ಕುಡಿಯಲು ಇಷ್ಟ ಪಡುತ್ತಾರೆ. ಟೀ ಬ್ಯಾಗ್ಗಳೊಂದಿಗೆ ಚಹಾವನ್ನು ಕುಡಿಯಲು ಇಷ್ಟಪಡುವ ಚಹಾ ಪ್ರೇಮಿಗಳು ಬಹಳ ಕಡಿಮೆ. ರುಚಿಗೆ ತಕ್ಕಂತೆ ಆದ್ಯತೆ ಕೊಡುವವರೇ ಹೆಚ್ಚು. ಕೆಲವೊಮ್ಮೆ ಖುಷಿಯಾದಾಗ, ತಲೆನೋವಾದಾಗ, ಟೆನ್ಶನ್ ಆದಾಗ ಒಂದು ಕಪ್ ಟೀ ಕೊಟ್ರೆ ಎಲ್ಲವೂ ಮರೆತೇ ಹೋಗುತ್ತದೆ. ಇಲ್ಲಿ ಮಹಿಳೆಯೊಬ್ಬರು ವಿಶೇಷ ವಿಧಾನದಲ್ಲಿ ಚಹಾ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗ್ಯಾಸ್ ಬದಲಿಗೆ ಏರ್ ಫ್ರೈಯರ್ ನಲ್ಲಿ ಚಹಾ ಮಾಡಿದ್ದಾಳೆ.
ವೈರಲ್ ವಿಡಿಯೋದಲ್ಲಿ ಮಹಿಳೆ ಏರ್ ಫ್ರೈಯರ್ನಲ್ಲಿ ಕಪ್ ಇಡುತ್ತಿರುವುದನ್ನು ಕಾಣಬಹುದು. ಅದರ ನಂತರ ಆಕೆ ಚಹಾದ ಬ್ಯಾಗ್ವೊಂದನ್ನು ಅದರಲ್ಲಿ ಹಾಕುತ್ತಾರೆ. ನಂತರ ಒಂದು ಲೋಟದಲ್ಲಿ ನೀರನ್ನು ಹಿಡಿದು ಕಪ್ಗೆ ಹಾಕುತ್ತಾರೆ. ರುಚಿಗೆ ತಕ್ಕಂತೆ 1 ಚಮಚ ಸಕ್ಕರೆಯನ್ನು ಸೇರಿಸುತ್ತಾರೆ. ನಂತರ ಏರ್ ಫ್ರೈಯರ್ನಲ್ಲಿ ಸಮಯವನ್ನು ಸೆಟ್ ಮಾಡುತ್ತಾರೆ. ನಿಗದಿ ಪಡಿಸಿದ ಸಮಯ ಪೂರ್ಣಗೊಂಡ ಬಳಿಕ ತೆಗೆದು ಕಪ್ಗೆ ಹಾಲನ್ನು ಸೇರಿಸುತ್ತಾರೆ. ಸ್ವಲ್ಪ ಸಮಯದ ನಂತರ ಆಕೆ ಮತ್ತೆ ಕಪ್ ತೆಗೆದಾಗ ಚಹಾ ಸಿದ್ಧವಾಗಿದೆ ಎಂದು ತೋರಿಸುವುದನ್ನು ನೋಡಬಹುದಾಗಿದೆ.
ನೆಟ್ಟಿಗರೊಬ್ಬರು, “ದಯವಿಟ್ಟು ಆ ಏರ್ ಫ್ರೈಯರ್ ಅನ್ನು ಸ್ವಚ್ಛಗೊಳಿಸಿ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ಟೀ ಕುಡಿದ ತಕ್ಷಣ ವಾಂತಿಯಾಗುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ಈ ಮಹಿಳೆಯ ಹೊಸ ಚಹಾ ಮಾಡುವ ವಿಧಾನವನ್ನು ಇಷ್ಟವಾಗಿಲ್ಲ, ಶಾರ್ಟ್ಕಟ್ ಉತ್ತಮವಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮಗದೊಬ್ಬರು, ಏನ್ ತಲೆ ಗುರು ಈಕೆಯದ್ದು, ಹೀಗೆ ತರಹೇವಾರಿ ಕಾಮೆಂಟ್ ಗಳು ಬಂದಿದೆ. ಈ ವಿಡಿಯೋವು 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.