ಲವರ್ಸ್ಗಳು ಯಾವಗಲೂ ಏಕಾಂತದಲ್ಲಿರಲು ಇಷ್ಟಪಡುತ್ತಾರೆ. ಹಾಗೆಯೇ ಪಾರ್ಕ್ವೊಂದರಲ್ಲಿ ಲವರ್ಸ್ಗಳು ಏಕಾಂತದಲ್ಲಿರುವಾಗ ಶಾಸಕರೊಬ್ಬರು ದಿಢೀರ್ ಅಂತಾ ಪಾರ್ಕ್ಗೆ ದಾಳಿ ಮಾಡಿದ್ರೆ? ಇಂತಹದೊಂದು ಘಟನೆ ಛತ್ತೀಸ್ಗಢದ ಭಿಲಾಯಿ ನಗರದ ಪಾರ್ಕ್ನಲ್ಲಿ ನಡೆದಿದೆ. ಏಕಾಏಕಿ ಎಂಟ್ರಿ ಕೊಟ್ಟ ಶಾಸಕ ಅಲ್ಲಿದ್ದ ಜೋಡಿಗಳನ್ನು ಪಾರ್ಕ್ನಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇವರ ಈ ಕ್ರಮಕ್ಕೆ ರೊಚ್ಚಿಗೆದ್ದ ಪ್ರೇಮಿಯೊಬ್ಬ OYO ರೂಂಗಳನ್ನು ಮುಚ್ಚಿದೆ. ನೀವೇ ನಮಗೆ OYO ರೂಂ ವ್ಯವಸ್ಥೆ ಮಾಡಿ ಅಂತಾ ಕೇಳಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಛತ್ತೀಸ್ಗಢಸ ಶಾಸಕ ರಿಕೇಶ್ ಸೇನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.