ಪ್ರೀತಿಗೆ ಅಂದ ಚಂದ ಬೇಕಾಗಿಲ್ಲ ಮನಸು ಶುದ್ಧವಾಗಿರಬೇಕು ಅನ್ನೋ ಮಾತಿಗೆ. ಪ್ರೀತಿಯಲ್ಲಿ ಬಿದ್ದರೆ ಎತ್ತರ, ಗಿಡ್ಡ, ಕಪ್ಪು, ಬಿಳಿ ಎಂಬ ಭೇದವಿಲ್ಲದೆ ತಮಗೆ ಇಷ್ಟವಾದ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹ ಜೋಡಿಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ವ್ಯಕ್ತಿ ಕೇವಲ ಮೂರು ಅಡಿ ಉದ್ದವಿದ್ದು, ಆತನ ಪ್ರೇಯಸಿಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಜೋಡಿಯ ಡ್ಯಾನ್ಸ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
ಈ ವ್ಯಕ್ತಿಯ ಹೆಸರು ಗೇಬ್ರಿಯಲ್ ಪಿಮೆಂಟೆಲ್. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ‘ಕಿಂಗ್’ ಎಂದೇ ಕರೆಯಲಾಗುತ್ತದೆ. ಅವನ ಪ್ರೇಯಸಿಯ ಹೆಸರು ಮೇರಿ ತೆಮಾರಾ. ಈ ಅದ್ಭುತ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಸದ್ಯ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.