- 3 ಸೆಕೆಂಡ್ನಲ್ಲಿ ABCD ಬರೆದು ಗಿನ್ನಿಸ್ ದಾಖಲೆ
- ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟ ತನ್ನದಾಗಿಸಿಕೊಂಡ ಎಸ್ ಕೆ ಅಶ್ರಫ್
ಗಿನ್ನಿಸ್ ದಾಖಲೆ ಮಾಡ್ಬೇಕಾದ್ರೆ ಒಂದು ಸ್ಪೆಷಲ್ ಟ್ಯಾಲೆಂಟ್ ಇರ್ಬೇಕಾಗುತ್ತೆ. ಗಿನ್ನಿಸ್ ರೆಕಾರ್ಡ್ ನಲ್ಲಿ ಹೆಸರು ಪಡಿಯೋದು ಅಷ್ಟು ಸುಲುಭದ ಕೆಲಸವಲ್ಲ. ಅದಿಕ್ಕೆ ಆದಂತ ಗುಣಮಟ್ಟ ಹೊಂದಿರಬೇಕಾಗುತ್ತೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ABCD ಬರೆದು ಗಿನ್ನಿಸ್ ರೆಕಾರ್ಡ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾನೆ.
ಸಾಮಾನ್ಯವಾಗಿ ನಾವು A ರಿಂದ Z ವರೆಗೂ ಟೈಪ್ ಮಾಡುವುದಕ್ಕೆ 40 ಸೆಕೆಂಡ್ಸ್ ನಿಂದ 1 ನಿಮಿಷ ಹಿಡಿಯಬಹುದು. ಆದ್ರೆ ಇಲ್ಲೊಬ್ಬ ಕೇವಲ 3 ಸೆಕೆಂಡ್ಸ್ ಗಳಲ್ಲಿ ಟೈಪ್ ಮಾಡಿ guinness ದಾಖಲೆ ಮಾಡಿದ್ದಾನೆ.
ಹೈದರಾಬಾದ್ ನ ಎಸ್ ಕೆ ಅಶ್ರಫ್ ಎಂಬ ವ್ಯಕ್ತಿಯೊಬ್ಬ ಅರೆ ಕ್ಷಣದಲ್ಲಿ ಅಂದ್ರೆ 2.88 ಸೆಕೆಂಡ್ಸ್ ನಲ್ಲಿ ಒಟ್ಟು 26 ಅಕ್ಷರಗಳು ಅಂದ್ರೆ A ರಿಂದ Z ವರೆಗೂ ಟೈಪ್ ಮಾಡಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟ ತನ್ನದಾಗಿಸಿಕೊಂಡಿದ್ದಾನೆ. ಈ ವಿಡಿಯೋವನ್ನ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.