- ಪ್ರೆಟ್ರೋಲ್ ಬಂಕ್ಗೆ ಸ್ಪಿಂಕ್ಲರ್ಸ್ ಆಳವಡಿಸಿದ ಮಾಲೀಕ
- ಬಿರು ಬಿಸಿಲಿನ ಬೇಗೆ ತಪ್ಪಿಸಲು ಮಾಲೀಕನ ಹೊಸ ಐಡಿಯಾ
ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಪಾಮಾನದಿಂದ ತಪ್ಪಿಸಿಕೊಳ್ಳಲು ಜನ ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಕೆಲವರು ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಛತ್ರಿಗಳನ್ನ ಉಪಯೋಗಿಸುತ್ತಿದ್ದಾರೆ. ಇನ್ನು ಕೆಲವರು ಏಟಿಎಂಗೆ ಅಥವಾ ಮಾಲ್ ಗಳಿಗೆ ಭೇಟಿ ನೀಡುತ್ತಾರೆ. ಎಲ್ಲಿ ತಂಪು ಅನ್ಸುತೋ… ಅಲ್ಲಿ ಎಲ್ಲಾ ಕಡೆ ಒಂದ್ ಎರಡು ನಿಮಿಷ ನಿಂತು ಬಿಡುತ್ತಾರೆ. ಆದ್ರೆ ಇಲ್ಲೊಬ್ಬ ಪೆಟ್ರೋಲ್ ಬಂಕ್ ನ ಮಾಲೀಕ ತನ್ನ ಗ್ರಾಹಕರಿಗೋಸ್ಕರ ವಾಟರ್ ಸ್ಪಿಂಕ್ಲರ್ಸ್ಗಳನ್ನ ಹಾಕ್ಸಿದ್ದಾರೆ.
ಹೈದರಾಬಾದ್ ನ ಕರೀಂನಗರದ ಜ್ಯೋತಿ ನಗರದ ಮಲ್ಕಪುರ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನ ಮಾಲೀಕ ಸ್ಪಿಂಕ್ಲರ್ಸ್ ಹಾಕಿಸಿ ಅಲ್ಲಿಗೆ ಬರುವ ಗ್ರಾಹಕರಿಗೆ ತಂಪು ನೀಡಿದ್ದಾನೆ. ತೆಲಂಗಾಣದಲ್ಲಿ ಬಿಸಿಲಿನ ಬೇಗೆ ಸುಮಾರು 40 ರಿಂದ 47 ಡಿಗ್ರಿ ಇದೆ. ಬೆಳಗ್ಗೆ ಸುಮಾರು 9 ಕ್ಕೆ ಬಿಸಿಲಿನ ಧಗೆ ಶುರುವಾಗುತ್ತೆ. ಅಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಕೂಡ ಹವಾಮಾನ ಇಲಾಖೆ ಘೋಷಿಸಿದ್ದಾರೆ. ಇದಕ್ಕೆ ಪೆಟ್ರೋಲ್ ಬಂಕ್ ನ ಮಾಲೀಕ ಇಂತಹ ಐಡಿಯಾವನ್ನು ಮಾಡಿ ಜನಕ್ಕೆ ತಂಪೆರಿದ್ದಿದಾನೆ. ಮಧ್ಯಾಹ್ನ ಸ್ಪಿಂಕ್ಲರ್ಸ್ ಆನ್ ಆಗುತ್ತದೆ. ಇದರಿಂದ ಅವರ ವ್ಯಾಪಾರ ಕೂಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಈ ಸ್ಪ್ರಿಂಕ್ಲಾರ್ಸ್ ಗಳನ್ನ ಗ್ರಾಹಕರಿಗೋಸ್ಕರ ಮಾತ್ರವಲ್ಲ. ಬಿಸಿಲಿನ ಧಗೆಗೆ ಪೆಟ್ರೋಲ್ ಬಂಕ್ ನಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದೆ ಇರಲಿ ಎಂದು ಹೀಗೆ ಮಾಡಿದ್ದಾರೆ. ಈ ಬಗ್ಗೆ ಸಿಬ್ಬಂದಿಗಳು ಹೇಳಿದ್ದಾರೆ…