- ಗ್ರಾಹಕನ ಮುಖಕ್ಕೆ ಉಗುಳಿನಿಂದ ಮಸಾಜ್ ಮಾಡಿದ ಕ್ಷೌರಿಕ
- ಮಸಾಜ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಲಕ್ನೋ : ಲಕ್ನೋದ ಸಲೂನ್ನಲ್ಲಿ ಕ್ಷೌರಿಕನೊಬ್ಬ ಗ್ರಾಹಕನ ಮುಖಕ್ಕೆ ತನ್ನದೇ ಆದ ಉಗುಳಿನಿಂದ ಮಸಾಜ್ ಮಾಡಿ ಇದೀಗ ಪೊಲೀಶರ ಅತಿಥಿಯಾಗಿದ್ದಾನೆ. ಮಸಾಜ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರೋಪಿ ಝೈದ್ ತನ್ನ ಕೈ ಮೇಲೆ ಉಗುಳಿ ಗ್ರಾಹಕರ ಮುಖವನನು ಉಜ್ಜಲು ಬಳಸಿರುವ ದೃಶ್ಯ ಸಲೂನ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಝೈದ್ ನ ಕೃತ್ಯದಿಂದ ಗ್ರಾಹಕನಿಗೆ ಅನುಮಾನ ಬಂದಿದ್ದು, ಕೂಡಲೇ ಅವರು ಸಲೂನ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಕ್ಷೌರಿಕ ತನ್ನ ಕೈಗೆ ಉಗುಳುವುದು ಮತ್ತು ಮುಖಕ್ಕೆ ಮಸಾಜ್ ಮಾಡಲು ಉಗುಳನ್ನು ಬಳಸುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಹಕನ ದೂರಿನ ಆಧಾರದ ಮೇಲೆ ಲಕ್ನೋ ಪೊಲೀಸರು ಝೈದ್ನನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಘಟನೆ ನಡೆದು ಕೆಲ ದಿನಗಳ ನಂತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.