- ಐಸ್ಕ್ರೀಂ ತಿನ್ನುವ ಮುನ್ನ ಎಚ್ಚರ..!
- ಆರ್ಡರ್ ಮಾಡಿದ ಐಸ್ ಕ್ರೀಂ ನಲ್ಲಿ ಜರಿಹುಳು ಪತ್ತೆ
ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮಲಾಡ್ ಪ್ರದೇಶದಲ್ಲಿ ಐಸ್ ಕ್ರೀಮ್ನಲ್ಲಿ ಮಾನವಮ ಬೆರಳು ಪತ್ತೆಯಾಗಿತ್ತು. ಆದರೀಗ ಅಂತಹದ್ದೇ ಘಟನೆಯೊಂದು ದೆಹಲಿಯ ಪಕ್ಕದ ನೋಯ್ಡಾದಲ್ಲಿ ನಡೆದಿದೆ.
ಡೆಲವರಿ ಆ್ಯಪ್ನಿಂದ ಆರ್ಡರ್ ಮಾಡಿದ ಐಸ್ ಕ್ರೀಂ ನಲ್ಲಿ ಜರಿಹುಳು(ಶತಪದಿ) ಪತ್ತೆಯಾಗಿದೆ. ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಆಹಾರ ಮತ್ತು ಸರಬರಾಜು ಇಲಾಖೆ ತಂಡವು ಸೆಕ್ಟರ್ -22 ರಲ್ಲಿರುವ ಡೆಲಿವರಿ ಆಪ್ ಸ್ಟೋರ್ಗೆ ಭೇಟಿ ನೀಡಿದ್ದು, ಎಲ್ಲಾ ಐಸ್ಕ್ರೀಂಗಳ ಮಾರಾಟವನ್ನು ನಿಷೇಧಿಸಿದೆ. ಐಸ್ ಕ್ರೀಂ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಐಸ್ ಕ್ರೀಂ ತಯಾರಿಕಾ ಕಂಪನಿ ಮತ್ತು ಡೆಲಿವರಿ ಆ್ಯಪ್ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ದೀಪಾ ದೇವಿ ಅವರು ಮಕ್ಕಳಿಗೆ ಮ್ಯಾಂಗೋ ಶೇಕ್ ಮಾಡಲು ಡೆಲವರಿ ಅಪ್ಲಿಕೇಶನ್ನಿಂದ ಐಸ್ಕ್ರೀಂ ಆರ್ಡರ್ ಮಾಡಿದ್ರು. ಆದರೆ ಐಸ್ ಕ್ರೀಂನಲ್ಲಿ ಜರಿ ಹುಳು ಕಾಣಿಸಿದೆ. ಆ್ಯಪ್ನ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ಕಂಪನಿಯೂ ತನ್ನ ತಪ್ಪನ್ನು ಒಪ್ಪಿಕೊಂಡು ಐಸ್ಕ್ರೀಂ ಹಣವನನು ಹಿಂದಿರುಗಿಸಿತು.