- ಸಿಶಿಲ್ ಮಾವರ್ ಎಂಬ ಯುವಕನ ಮೂಗಿನೊಳಗೆ ಜಿಗಣೆ
- ಚಿಕಿತ್ಸೆ ನಡೆಸಿ ಮೂಗಿನೊಳಗಿದ್ದ ಜಿಗಣೆ ತೆಗೆದ ಡಾ.ಸುಭಾಷ್ ಚಂದ್ರ ವರ್ಮಾ
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೋರ್ವ ಜಲಪಾತದಲ್ಲಿ ಸ್ನಾನ ಮಾಡುವಾಗ ತನಗೇ ತಿಳಿಯದೆ ಜಿಗಣೆಯೊಂದು ಅವನ ಮೂಗಿಗೆ ಪ್ರವೇಶಿಸಿದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಪ್ರಯಾಗರಾಜ್ನ ಯುವಕ ಸಿಶಿಲ್ ಮಾವರ್ ಎಂಬುವವರು ತನ್ನ ಕೆಲವು ಸ್ನೇಹಿತರೊಂದಿಗೆ ಉತ್ತರಾಖಂಡದ ಜಲಪಾತದಲ್ಲಿ ಸ್ನಾನ ಮಾಡಲು ಹೋಗಿದ್ದ. ಈ ವೇಳೆ ಅವನ ಮೂಗಿನೊಳಗೆ ಜಿಗಣೆ ಹೋಗಿದೆ. ಯುವಕ ಅದರ ಅರಿವಾಗದೇ ಜಲಪಾತದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಇದರ ಬಗ್ಗೆ ಆತನಿಗೆ ಏನೂ ಅರಿವಾಗದಿದ್ದರೂ ಮನೆಗೆ ಬರುವಷ್ಟರಲ್ಲಿ ಮೂಗಿನಲ್ಲಿ ಏನೋ ತೊಂದರೆಯಾಗುತ್ತಿದೆ ಎಂದು ಅವನಿಗೆ ತಿಳಿದಿದೆ. ಇದ್ದಕ್ಕಿದ್ದ ಹಾಗೆ, ಅವನ ಮೂಗಿನಿಂದ ರಕ್ತವೂ ಹರಿಯಲಾರಂಭಿಸಿದೆ. ಆ ಜಿಗಣೆ 14 ದಿನಗಳ ಕಾಲ ಅವನ ಮೂಗಿನಲ್ಲಿಯೇ ಇದ್ದು ರಕ್ತ ಹೀರುತ್ತಲೇ ಇತ್ತು ಎಂದು ತಿಳಿದು ಬಂದಿದೆ. ವೈದ್ಯರು ಯುವಕನ ಮೂಗಿನಲ್ಲಿ ಜೀವಂತ ಜಿಗಣೆ ಇರುವ ಬಗ್ಗೆ ಅರಿತ ಆಸ್ಪತ್ರೆಯ ಇಎನ್ ಟಿ ವಿಭಾಗದ ಸರ್ಜನ್ ಡಾ.ಸುಭಾಷ್ ಚಂದ್ರ ವರ್ಮಾ ಚಿಕಿತ್ಸೆ ನಡೆಸಿ ಮೂಗಿನ ‘ಯಾವುದೇ ಭಾಗಕ್ಕೆ ಹಾನಿಯಾಗದಂತೆ ಟೆಲಿಸ್ಕೋಪಿಕ್ ವಿಧಾನದಿಂದ ಲೀಚ್ ಅನ್ನು ಮೂಗಿನಿಂದ ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.