ಹದಿಹರೆಯದ ಮಕ್ಕಳು ಪ್ರೀತಿ, ಪ್ರೇಮ ಅಂತಾ ದಾರಿ ತಪ್ಪಿದ್ರೆ ಯಾವ ತಂದೆ-ತಾಯಿಯೂ ಸಹಿಸೊಲ್ಲ. ತಂದೆ-ತಾಯಿಯ ಭಯದಿಂದ ಹೆಚ್ಚಿನ ಯುವಕ ಯುವತಿಯರು ತಮ್ಮ ಪ್ರೇಮಿಗಳೊಂದಿಗೆ ಕದ್ದು ಮುಚ್ಚಿ ಮಾತನಾಡೋದು, ಮೀಟ್ ಆಗೋದು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಭಂಡ ಧೈರ್ಯ ಮಾಡಿ ತನ್ನ ಲವರ್ ಅನ್ನು ಆಕೆಯ ಮನೆಯ ಟೆರೇಸ್ ಮೇಲೆಯೇ ಕದ್ದು ಮುಚ್ಚಿ ಮೀಟ್ ಆಗಿದ್ದು, ಈ ವೇಳೆ ಹುಡುಗಿಯ ಅಮ್ಮ ಎಂಟ್ರಿ ಕೊಟ್ಟಿದ್ದಾರೆ. ಪ್ರೇಮಿಗಳಿಬ್ಬರಿಗೂ ಅಮ್ಮನ ಕೈಯಿಂದ ಸರಿಯಾಗಿ ಚಪ್ಪಲಿ ಏಟು ಬಿದ್ದಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದೇ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದ್ದು, ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆ ಮನೆಯ ಟೆರೇಸ್ ಮೇಲೆ ಏಕಾಂತದಲ್ಲಿದ್ದ ವೇಳೆ, ಆಕೆ ಅಮ್ಮನ ಕೈಗೆ ರೆಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಪ್ರೇಮಿಗಳಿಬ್ಬರಿಗೂ ಅಮ್ಮನ ಕೈಯಿಂದ ಸರಿಯಾಗಿ ಧರ್ಮದೇಟು ಬಿದ್ದಿದ್ದು, ತಕ್ಷಣ ಆ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿ ಹೋಗಿದ್ದಾನೆ.