- ವಾಹನ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರನ್ನೇ ಎಳೆದೊಯ್ದ ಕಾರು ಚಾಲಕ
- ಹರಿಯಾಣದ ಫರಿದಾಬಾದ್ನಲ್ಲಿ ನಡೆದ ಘಟನೆ
ವಾಹನ ತಪಾಸಣೆ ವೇಳೆ ಕಾರು ಚಾಲಕ ಕುಡಿದ ಅಮಲಿನಲ್ಲಿ ಪೊಲೀಸ್ ಎಂಬುದನ್ನು ಲೆಕ್ಕಿಸದೇ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಪೊಲೀಸರು ಚಾಲಕನ ಬಳಿ ದಾಖಲೆ ಕೇಳಿದ್ದು, ಸರಿಯಾದ ದಾಖಲೆ ಹಾಗೂ ಕುಡಿದು ಕಾರು ಓಡಿಸುತ್ತಿದ್ದ ಕಾರಣ ಟ್ರಾಫಿಕ್ ಪೊಲೀಸರಿಗೆ ಉತ್ತರಿಸಲು ಆಗದೇ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲಲಿ ವೈರಲ್ ಆಗಿದೆ.
ಪೊಲೀಸರು ಹೇಳುವ ಪ್ರಕಾರ ನಿನ್ನೆ ಸಂಜೆ ಚಾಲಕನೊಬ್ಬ ಕುಡಿದ ಆಮಲಿನಲ್ಲಿ ತನ್ನ ಕಾರಿನಲ್ಲಿ ಒಂದಿಷ್ಟು ಪ್ರಯಾಣಿಕರನ್ನು ಕೂರಿಸಿಕೊಂಡು ಕಾರು ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರಿಗೆ ವಾಹನ ತಪಾಸನೆ ವೇಳೆ ಈ ವಿಚಾರ ತಿಳಿದು ಬಂದಿದೆ. ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಚಾಲಕನ ಬಳಿಗೆ ಬಂದು ವಾಹನದ ದಾಖಲೆಗಳನ್ನು ಕೇಳಿದ್ದಾರೆ. ದಾಖಲೆ ಇಲ್ಲದ ಕಾರಂ ಆತನಿಗೆ ದಂಡ ವಿಧಿಸಿದ್ದಾರೆ. ನಂತರ ಇಬ್ಬರ ನಡುವೆ ವಾದ ನಡೆದಿದೆ.