ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು. ಎಷ್ಟೇ ಜಾಗೃತಿ ವಹಿಸಿದ್ದರೂ ಕೆಲವೊಮ್ಮೆ ಅಪಾಗಳು ಸಂಭವಿಸಿಬಿಡುತ್ತೆ. ಇಂತಹದ್ದೇ ಒಂದು ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಕಿಟಿಕಿಯಿಂದ ಏಳು ತಿಂಗಳ ಮಗುವೊಂದು ಅಪಾರ್ಟ್ಮೆಂಟ್ ಒಂದರ ರೂಫ್ ಶೀಟ್ ಮೇಲೆ ಬಿದ್ದಿದೆ. ನಂತರ ನೆರೆಹೊರೆಯವರ ರಕ್ಷಣೆಗೆ ಧಾವಿಸಿ ಮಗುವಿನ ಪ್ರಾಣವನ್ನು ರಕ್ಷಿಸಿದ್ದಾರೆ. ಈ ಕುರಿತು ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.