ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗಿಂತಲೂ ಹೆಚ್ಚಿನವರು ರೀಲ್ಸ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವಿವ್ ಆಗಿರುತ್ತಾರೆ. ಈ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸೃಷ್ಟಿಸುವ ಅನಾಹುತಗಳು ಒಂದಲ್ಲ ಎರಡಲ್ಲ. ರೀಲ್ಸ್ ವಿಚಾರವಾಗಿ 4 ಹುಡುಗಿಯರು ನಡು ರಸ್ತೆಯಲ್ಲೇ ಜಗಳವಾಡಿದ್ದಾರೆ. ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಜಗಳದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸಾರ್ವಜನಿಕ ಸ್ಥಳದಲ್ಲಿ ಜನರಿರುತ್ತಾರೆ ಎಂಬುವುದನ್ನು ತಲೆ ಕೆಡಿಸಿಕೊಳ್ಳದೇ ನಾಲ್ವರು ಹುಡುಗಿಯರು ನಡು ರಸ್ತೆಯಲ್ಲೇ ಜಗಳವಾಡಿದ್ದಾರೆ. ನಂತರ ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇನ್ಟಾಗ್ರಾಮ್ ರೀಲ್ಸ್ನಲ್ಲಿ ಮಾಡಿದ ಕಾಮೆಂಟ್ಸ್ ವಿಚಾರವಾಗಿ ನಾಲ್ವರ ನಡುವೆ ಜಗಳ ನಡೆದಿದೆ.