ಮಕ್ಕಳು ಸ್ಕೂಲ್ ಬಂಕ್ ಮಾಡಿರುವುದನ್ನು ಕೇಳಿರುತ್ತಿರಾ ಆದ್ರೆ ಇಲ್ಲೊಬ್ಬ ಮುಖ್ಯ ಶಿಕ್ಷಕಿ ಶಾಲೆಗೆ ಬಂಕ್ ಮಾಡಿ ಫೇಶಿಯಲ್ ಮಾಡಿಸಿಕೊಂಡಿದ್ದಾರೆ. ಶಾಲೆಯ ಆವರಣದಲ್ಲೇ ಫೇಶಿಯಲ್ ಮಾಡಿಸಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇಂತಹದೊಂದು ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಏಪ್ರಿಲ್ 18ರಂದು ಬೆಳಗ್ಗೆ ಉತ್ತರ ಪ್ರದೇಶದ ಬಿಘಾಪುರ ಬ್ಲಾಕ್ನ ದಂಡಮಾವು ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ, ಮುಖ್ಯೋಪಾಧ್ಯಾಯಿನಿ ಸಂಗೀತಾ ಸಿಂಗ್ ಮಕ್ಕಳಿಗೆ ಪಾಠ ಮಾಡುವ ಬದಲು, ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಊಟ ತಯಾರಿಸುವ ಕೋಣೆಯಲ್ಲಿ ಫೇಶಿಯಲ್ ಮಾಡಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಇದನ್ನು ಕಂಡು ಸಹಾಯಕ ಶಿಕ್ಷಕಿ ಅನಮ್ ಖಾನ್ ಅವರು ವಿಡಿಯೋ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಸಂಗೀತಾ ಸಿಂಗ್, ಅನಮ್ ಖಾನ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಕೈ ಕಚ್ಚಿ ಗಾಯಗೊಳಿಸಿದ್ದಾರೆ. ಇನ್ನು ಸಂಗೀತ ಸಿಂಗ್ ಹಲ್ಲೆ ಮಾಡಿದ ವಿಡಿಯೋ ಹಾಗೂ ಫೇಶಿಯಲ್ ಮಾಡಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅನಮ್ ಖಾನ್ ಪೋಸ್ಟ್ ಮಾಡಿದ್ದಾರೆ.
ಸಂಗೀತಾ ಸಿಂಗ್ ವಿರುದ್ಧ ಅನಮ್ ಖಾನ್ ಬಿಘಾಪುರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಿಕ್ಷಕರಿಂದ ದೂರು ಬಂದಿದ್ದು, ಈ ಬಗ್ಗೆ ತನಿಖೇ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಘಾಪುರ ವೃತ್ತಾಧಿಕಾರಿ ಮಾಯಾ ರೈ ತಿಳಿಸಿದ್ದಾರೆ.