ದೇಶದಲ್ಲಿ ಭುಗಿಲೆದ್ದಿರುವ ವಕ್ಫ್ ವಿವಾದ. ವಕ್ಫ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳೇನು.? ಅಸಲಿಗೆ ವಕ್ಫ್ ಕಾಯ್ದೆ ಎಂದರೇನು? ವಕ್ಫ್ ಮಂಡಳಿ ಎಂದರೇನು ಅದರ ಕಾರ್ಯವ್ಯಾಪ್ತಿ ಎಷ್ಟು?, ವಕ್ಫ್ ಕಾಯ್ದೆ ತಿದ್ದುಪಡಿ ಸುತ್ತ ರಾಜಕೀಯ ಚರ್ಚೆಗಳು ಏಕೆ.? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ವಕ್ಫ್ ಅಂದ್ರೆ.?
ವಕ್ಫ್ ಎಂಬ ಪದವು ಅರೇಬಿಕ್ ಭಾಷೆಯಿಂದ ಬಂದಿದೆ. ವಕ್ಫ್- ದೇವರ ಹೆಸರಿನಲ್ಲಿ ಸಮರ್ಪಿತ ವಸ್ತು ಅಥವಾ ಹಣ, ಚರ ಮತ್ತು ಸ್ಥಿರ ಆಸ್ತಿ ಎಂಬ ಎರಡೂ ಅರ್ಥಗಳನ್ನ ಕೊಡುತ್ತದೆ. ಹಣ, ಭೂಮಿ, ಬೆಲೆಬಾಳುವ ವಸ್ತು ದಾನ ಮಾಡಬಹುದು.
ವಕ್ಫ್ ಜಾರಿ ಆಗಿದ್ದು ಯಾವಾಗ.?
ಭಾರತದಲ್ಲಿ 1954ರಲ್ಲಿ ವಕ್ಫ್ ಕಾಯ್ದೆ ಅಂಗೀಕಾರವಾಯಿತು. ನೆಹರು ಅವರ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದೆ. ವಕ್ಫ್ ಕೆಲಸಗಳನ್ನ ಸರಳಗೊಳಿಸುವ ಉದ್ದೇಶ ಹೊಂದಿದೆ. ಈ ಕಾಯ್ದೆಯಲ್ಲಿ ವಕ್ಫ್ ಆಸ್ತಿ ನಿರ್ವಹಣೆ & ನಿಬಂಧನೆ ಮಾಹಿತಿ ಇದೆ. 1964-ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಅಡಿ ರಚನೆ ಮಾಡಲಾಗಿದೆ. 1995ರಲ್ಲಿ ವಕ್ಫ್ ಕಾಯ್ದೆಗೆ ಮೊದಲ ತಿದ್ದುಪಡಿಯನ್ನ ತರಲಾಗಿದೆ. 2013 ರಲ್ಲಿ ವಕ್ಫ್ ಕಾಯ್ದೆಗೆ 2ನೇ ಬಾರಿ ತಿದ್ದುಪಡಿ ಮಾಡಲಾಯಿತು. 2013 ತಿದ್ದುಪಡಿ ವಕ್ಫ್ ಹಕ್ಕುಗಳನ್ನ ಮತ್ತಷ್ಟು ಬಲಪಡಿಸಿತು. 1995-ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ವಕ್ಫ್ ಗೆ ಅನುಮತಿಯನ್ನ ನೀಡಲಾಗಿದೆ.
ವಕ್ಫ್ ಅಂದ್ರೆ ಇಸ್ಲಾಂ ಧರ್ಮದಲ್ಲಿ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದಾನ ಮಾಡುವ ಆಸ್ತಿ. ಇದನ್ನು ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಶಿಕ್ಷಣ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಅಲ್ಲದೇ ವಕ್ಫ್ ತಮ್ಮ ಆಸ್ತಿಗಳನ್ನು ಆಯಾ ಜಿಲ್ಲಾಧಿಕಾರಿಗಳ ಬಳಿ ನೋಂದಣಿ ಮಾಡುವುದು ಕಡ್ಡಾಯ. ದೇಶದಲ್ಲಿ 30 ವಕ್ಫ್ ಮಂಡಳಿಗಳು ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳನ್ನ ವಕ್ಫ್ ನಿರ್ವಹಿಸುತ್ತಿದೆ. ಅಲ್ಲದೇ ಎಲ್ಲಾ ವಕ್ಫ್ ಆಸ್ತಿಗಳಿಂದ ವಾರ್ಷಿಕವಾಗಿ 500 ಕೋಟಿಗೂ ಹೆಚ್ಚು ರೂಪಾಯಿ ಆದಾಯ ಬರುತ್ತದೆ.
ವಕ್ಫ್ ಆಸ್ತಿ ವಿವಾದ ಏಕೆ?
ವಕ್ಫ್ ಆಸ್ತಿ ಹಕ್ಕುಗಳ ಬಗ್ಗೆಯೇ ಭಾರೀ ವಿವಾದಗಳ ಆರೋಪಗಳು ಕೇಳಿ ಬರುತ್ತಿವೆ. ವಕ್ಫ್ ಬೋರ್ಡ್-ಗೆ ಯಾವುದೇ ಆಸ್ತಿ ತನಿಖೆ ಅಧಿಕಾರ ಹೊಂದಿದೆ. ಯಾವುದೇ ಆಸ್ತಿಯನ್ನು ಕ್ಲೈಮ್ ಮಾಡುವ ಹಕ್ಕು ಹೊಂದಿದೆ. ವಕ್ಫ್ ಕಾಯ್ದೆ ಸೆಕ್ಷನ್ 85 ರ ಪ್ರಕಾರ ಕೋರ್ಟ್ ನಲ್ಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ವಕ್ಫ್ ನಿರ್ಧಾರ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನಲ್ಲಿಯೂ ಪ್ರಶ್ನಿಸಲು ಸಾಧ್ಯವಿಲ್ಲದಂತಹ ವಿಶೇಷ ಅಧಿಕಾರವನ್ನ ಹೊಂದಿದೆ.
ವಕ್ಫ್ ವಿರುದ್ಧ ಬ್ರಿಟಿಷರ ಕೆಂಗಣ್ಣು.!
ಬ್ರಿಟಿಷರ ಕಾಲದಿಂದಲೂ ವಕ್ಫ್ ವಿವಾದ ನಡೀತನೇ ಇದೇ. ಬ್ರಿಟಿಷರ ಆಳ್ವಿಕೆಯಲ್ಲಿ ವಕ್ಫ್ ಆಸ್ತಿ ಸ್ವಾಧೀನಕ್ಕೆ ವಿವಾದವಾಗಿತ್ತು. ಲಂಡನ್ನ ಪ್ರಿವಿ ಕೌನ್ಸಿಲ್ಗೆ ವಿವಾದ ತಲುಪಿತ್ತು. ಬ್ರಿಟನ್ನಲ್ಲಿ ನಾಲ್ವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿತ್ತು. ವಕ್ಫ್ ಅಕ್ರಮ ಎಂದು ಬ್ರಿಟಿಷ್ ಕೋರ್ಟ್ ತೀರ್ಪು ನೀಡಿತ್ತು. ಬ್ರಿಟನ್ ಕೋರ್ಟ್ ತೀರ್ಪನ್ನ ಬ್ರಿಟಿಷ್ ಭಾರತ ಸರ್ಕಾರ ಒಪ್ಪಿರಲಿಲ್ಲ. ತೀರ್ಪು ವಿರೋಧಿಸಿ ವಕ್ಫ್ ದೃಢೀಕರಣ ಕಾಯಿದೆ 1913 ಜಾರಿ ಮಾಡಲಾಯಿತು. ಈ ಮೂಲಕ ಮುಸ್ಲಿಮರ ವಕ್ಫ್ ಮಂಡಳಿ ಜೀವಂತವಾಗಿದೆ.