ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿಗೆ ಸಂಚು ನಡೆಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೌದು, ಮೂಲಗಳ ಪ್ರಕಾರ ದುಷ್ಕರ್ಮಿಗಳು ಬಾಲಿವುಡ್ ನಟ ‘ಶಾರುಖ್ ಖಾನ್’ ಮೇಲೂ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ನಟ ಶಾರೂಖ್ ಖಾನ್ ನಿವಾಸ ಮನ್ನತ್ ಬಳಿ ಕಬ್ಬಿಣದ ಏಣಿ ಪತ್ತೆಯಾಗಿದ್ದು, ಏಣಿ ಬಳಸಿ ದುಷ್ಕರ್ಮಿಗಳು ಶಾರೂಖ್ ಮನೆ ನುಗ್ಗಲು ಸ್ಕೆಚ್ ಹಾಕಿದ್ದರು. ಆದರೆ ನಟ ಶಾರೂಖ್ ಖಾನ್ ಇದುವರೆಗೆ ದೂರು ನೀಡಿಲ್ಲ.
ಸೈಫ್ ಅಲಿಖಾನ್ ಅವರ ಸದ್ಗುರು ಶರಣ್ ಅಪಾರ್ಟ್ ಮೆಂಟ್ಗೆ ನುಗ್ಗಿ ಚಾಕು ಇರಿಯುವುದಕ್ಕೂ ಮುನ್ನ ಆರೋಪಿ ನಟ ಶಾರುಖ್ ಅವರ ನಿವಾಸ ‘ಮನ್ನತ್’ ಮೇಲೆಯೂ ದಾಳಿಗೆ ಸಂಚು ರೂಪಿಸಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಜ.14ರಂದು ಮುಂಬೈನಲ್ಲಿರುವ ಶಾರುಖ್ ಖಾನ್ ಅವರ ನಿವಾಸದ ಬಳಿ ಅನುಮಾನಾಸ್ಪದ ವ್ಯಕ್ತಿಯೊಬ್ಬರ ಚಲನವಲನಗಳು ಕಂಡು ಬಂದಿದೆ.
ಮನ್ನತ್ ನಿವಾಸದ ಪಕ್ಕದಲ್ಲಿರುವ ರಿಟ್ರೇಟ್ ಹೌಸ್ನ ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 6-8 ಅಡಿ ಉದ್ದದ ಕಬ್ಬಿಣ ಏಣಿಯನ್ನು ಹತ್ತಿ, ಶಾರುಖ್ ಮನೆಯ ಆವರಣಗಳನ್ನು ಪರಿಶೀಲಿಸಿರುವುದು ಬಹಿರಂಗವಾಗಿದೆ. ಈ ವ್ಯಕ್ತಿ ಹಾಗೂ ಸೈಫ್ಗೆ ಇರಿದ ವ್ಯಕ್ತಿಗೂ ಹೋಲಿಕೆ ಕಂಡು ಬಂದಿದ್ದು, ಪೊಲೀಸರು ಆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಘಟನೆಗೆ ಸಂಬಂಧಿಸಿದಂತೆ ಶಾರುಖ್ ಯಾವುದೇ ದೂರುದಾಖಲಿಸಿಲ್ಲವಾದರೂ, ಪೊಲೀಸರುಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ. ಏಕೆಂದರೆ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೂ ದಾಳಿ ಯತ್ನ ನಡೆದ ಕಾರಣ ಯಾವನ್ನೂ ಪೊಲೀಸರು ಲಘು ವಾಗಿ ಪರಿಗಣಿಸುತ್ತಿಲ್ಲ.
ಸದ್ಯ, ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ .ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ. ಬಾಲಿವುಡ್ ಸ್ಟಾರ್ ನಟರನ್ನೇ ದುಷ್ಕರ್ಮಿಗಳು ಟಾರ್ಗೆಟ್ ಮಾಡುತ್ತಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ಅವರಿಗೆ ಬಿಷ್ಟೋಮ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಗಳು ಬಂದಿತ್ತು. ನಂತರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಗೂ ಕೊಲೆ ಬೆದರಿಕೆ ಬಂದಿತ್ತು. ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಮಾಡಿದ ಹಲವಾರು ಬೆದರಿಕೆಗಳ ನಂತರ ಶಾರೂಖ್ ಖಾನ್ ಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕಲಾಗಿದೆ.