ರಾಜ್ಯದಲ್ಲಿ ವಾತಾವರಣದಲ್ಲಿ ಭಾರೀ ವ್ಯತ್ಯಾಸ ಒಂಟಾಗಿದೆ. ಈಗ ನಡೆಯುತ್ತಿರುವುದು ಚಳಿಗಾಲವೋ ಮಳೆಗಾಲವೋ ಬೇಸಿಗೆಕಾಲವೋ ಒಂದೂ ತಿಳಿಯುತ್ತಿಲ್ಲಾ. ಕಳೆದ ವಾರ ಭಾರೀ ಚಳಿ ಕಂಡುಬಂದಿತ್ತು, ಆದರೆ ಈಗ ತಾಪಮಾನದಲ್ಲಿ ಏರಿಕೆ ಕಂಡಿದೆ.
ಈ ಬಾರಿ ಮಳೆಗಾಲ, ಬೇಸಿಗೆ ಕಾಲ ಎರಡೇ ಇರುವಂತೆ ಗೋಚರಿಸುತ್ತಿದೆ. ಡಿಸೆಂಬರ್ ಮುಗಿಯುತ್ತಾ ಬಂದಿದ್ದು, ಹೊಸ ವರ್ಷ ಆರಂಭಕ್ಕೆ 10 ದಿನಗಳು ಬಾಕಿ ಉಳಿದಿವೆ. ಈಗಲೇ ಗರಿಷ್ಠ ಉಷ್ಣಾಂಶ ಏರಿಕೆಯಾದರೆ ಜನವರಿ ಆರಂಭದಿಂದಲೇ ಬೇಸಿಗೆಯ ಸೆಕೆ ಪ್ರಾರಂಭವಾಗಬಹುದು ಎನ್ನುವ ಸಂಶಯ ಮೂಡಿದೆ.
ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಜಯನಗರ, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ.