ಒಂದು ಕಾಲದ ಟಾಲಿವುಡ್ನ ಸೂಪರ್ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ. ಇವರು ಡಿವೋರ್ಸ್ ಮಾಡಿಕೊಂಡು ಬರೋಬ್ಬರಿ 3 ವರ್ಷಗಳು ಕಳೆದಿವೆ. ಯಾವ ಕಾರಣಕ್ಕೆ ಇಬ್ಬರು ಸೆಪರೇಟ್ ಆದ್ರೂ ಅನ್ನೋ ವಿಚಾರ ಇನ್ನೂ ಗೊತ್ತಿಲ್ಲ. ಸಮಂತಾಗೆ ನಾಗಚೈತನ್ಯ ಮಾತ್ರ ಸರಿಯಾದ ಆಯ್ಕೆ ಆಗಿರಲಿಲ್ಲ ಅನ್ನೋದು ಮಾತ್ರ ಟಾಲಿವುಡ್ ಮಂದಿಯ ಅಭಿಪ್ರಾಯ.
ಇತ್ತ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಜತೆ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಆಪ್ತರ ಸಮ್ಮುಖದಲ್ಲಿ ಇಬ್ಬರ ಎಂಗೇಜ್ಮೆಂಟ್ ಕೂಡ ಆಗಿದೆ. ಅತ್ತ ನಟಿ ಸಮಂತಾ ತನ್ನ ಸಿನಿ ಕರಿಯರ್ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ವೆಬ್ ಸಿರೀಸ್, ಸಿನಿಮಾ, ರಿಯಾಲಿಟಿ ಶೋ ಎಂದು ಎಲ್ಲೆಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಮಧ್ಯೆ ಸಮಂತಾ ಹಳೇ ಸಂದರ್ಶನದಲ್ಲಿ ಆಡಿದ್ದ ಮಾತುಗಳು ವೈರಲ್ ಆಗಿದೆ.
ಸ್ಯಾಮ್ ಹೇಳಿದ್ದೇನು?
ಮ್ಯಾರೇಜ್ ನಂತರ ಲವ್ ಅನ್ನೋದು ಸಖತ್ ಡಿಫರೆಂಟ್ ಅನಿಸ್ತಿದೆ. ಪ್ರೀತಿ ಎಂದರೆ ಜವಾಬ್ದಾರಿ, ಇಲ್ಲಿ ಇಬ್ಬರು ಇಬ್ಬರಾಗಿ ಉಳಿಯುವುದಿಲ್ಲ. ಒಬ್ಬರನ್ನು ಒಬ್ಬರು ಇಂಪ್ರೆಸ್ ಮಾಡುತ್ತಲೇ ಇರಬೇಕು. ಒಂದಾಗಿ ಕೆಲಸ ಮಾಡಬೇಕು. ಮದುವೆ ಅನ್ನೋದು ಸಖತ್ ಸೆಕ್ಯೂರ್ಡ್ ಹಾಗೂ ಪ್ರೊಟೆಕ್ಟಿವ್ ಆಗಿದೆ. ಇದು ನನಗೆ ಬಹಳ ರಿಲ್ಯಾಕ್ಸ್ ಅನಿಸುತ್ತದೆ ಎಂದಿದ್ದರು ಸಮಂತಾ.