ಮೆಟಾ ಸಂಸ್ಥೆಯ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸಾಗ್ರಾಮ್ ಸೇವೆಗಳು ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ವಿಶ್ವದಾದ್ಯಂತ ಸ್ಥಗಿತಗೊಂಡಿದ್ದು, ಬಳಕೆದಾರರು ಕೊಂಚಕಾಲ ಪರದಾಡುವಂತಾಗಿದೆ. ಅನೇಕ ವಾಟ್ಸಪ್ ಬಳಕೆದಾರರು ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ತೊಂದರೆಯಾಗಿರುವುದಾಗಿ ವರದಿ ಮಾಡಿದ್ದಾರೆ. ವಾಟ್ಸಾಪ್ ವೆಬ್, ಫೇಸ್ಟುಕ್, ಫೇಸ್ಟುಕ್, ಇನ್ ಸ್ಟಾಗ್ರಾಂ ಲಾಗಿನ್ ತಡರಾತ್ರಿವರೆಗೂ ಸರಿಯಾಗುತ್ತಿರಲಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಸೇವೆಗಳ ಸ್ಥಗಿತದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆತಂಕ ಸೃಷ್ಟಿಯಾಗಿದ್ದು. ಸರ್ವರ್ ಡೌನ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಸೇವೆಗಳು ಇದೀಗ ಸಹಜ ಸ್ಥಿತಿಗೆ ಮರಳಿವೆ ಎಂದು ಮೆಟಾ ಸಂಸ್ಥೆ ಮಾಹಿತಿ ಕೊಟ್ಟಿದೆ.
Continue Reading