2025ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ದೇಶಾದ್ಯಂತ ಹಲವು ವಸ್ತುಗಳು ದಾಖಲೆಯ ಮಟ್ಟದಲ್ಲಿ ಸೇಲ್ ಆಗಿವೆ. ಈ ಬಾರಿ ಮದ್ಯ ಅಂದರೆ ಎಣ್ಣೆ ಹೊರತುಪಡಿಸಿ ದ್ರಾಕ್ಷಿ, ಮದ್ಯ ಹಾಗೂ ವಿವಿಧ ಬಗೆಯ ಫ್ಲೇವರ್ಗಳ ಕಾಂಡೋಮ್ಗಳು ಅತಿ ಹೆಚ್ಚು ಮಾರಾಟವಾಗಿದೆ ಎಂದು ತಿಳಿದುಬಂದಿದೆ.
2025 ರ ಹೊಸ ವರ್ಷದ ಮೊದಲ ದಿನಕ್ಕೆ ಕಾಲಿಡುತ್ತಿದ್ದಂತೆ ವಾಣಿಜ್ಯ ಉದ್ಯಮಗಳಿಗೆ ಸಿಕ್ಕಾಪಟ್ಟೆ ಬೂಸ್ಟ್ ಸಿಕ್ಕಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಯಾವ ಯಾವ ಫ್ಲೆವರ್ನ ಕಾಂಡೋಮ್ಗಳನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ ಅನ್ನೋದರ ಕುರಿತು ವಾಣಿಜ್ಯ ಸಂಸ್ಥೆಗಳಾದ ಬ್ಲಿಂಕಿಟ್ ಹಾಗೂ ಸ್ವಿಗ್ಗಿ ಇನ್ಸ್ಟಾಮಾರ್ಟ್ಗಳು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಅತಿ ಹೆಚ್ಚು ಸೇಲ್ ಆದ ಚಾಕೊಲೇಟ್ ಫ್ಲೇವರ್:
2025ರ ಹೊಸ ವರ್ಷದ ಮೊದಲ ದಿನದ ರಾತ್ರಿ ವಿವಿಧ ಫ್ಲೇವರ್ ಕಾಂಡೋಮ್ಗಳು ದೇಶಾದ್ಯಂತ ಸೇಲ್ ಆಗಿವೆ. ಚಾಕೊಲೇಟ್ ಫ್ಲೇವರ್ಗಳು 39.1%, ಸ್ಟ್ರಾಬೆರಿ 31.0%, ಬಬಲ್ಗಮ್ ಫ್ಲೇವರ್ 19.8%, ಇತರೇ ಫ್ಲೇವರ್ಗಳು 10.1% ಕಾಂಡೋಮ್ಗಳು ಮಾರಾಟವಾಗಿದೆ ಎಂದು ಮಾಹಿತಿ ದೊರಕಿದೆ.
ಮೊದಲೆಲ್ಲ ಸ್ವಿಗ್ಗಿ, ಝೊಮೆಟೋಗಳು ಬರೀ ಫುಡ್ ಆರ್ಡರ್ ಮಾಡಲು ಮಾತ್ರ ಬಳಸಿತ್ತಿದ್ದರು. ಆದರೆ ಇದೀಗ ಫುಡ್ ಡೆಲಿವರಿ ಆ್ಯಪ್ಗಳಲ್ಲಿ ಅತೀ ಹೆಚ್ಚು ಕಾಂಡೋಮ್ಗಳನ್ನು ಆರ್ಡರ್ ಮಾಡುತ್ತಿದ್ದಾರೆ. ಪ್ರತೀ ಬಾರಿಯಂತೆ ಭಾರತವು 2025ರ ಹೊಸ ವರ್ಷದ ಮೊದಲ ರಾತ್ರಿ ಕೆಲವು ತ್ವರಿತ ಡೆಲಿವರಿ ದಾಖಲೆಗಳನ್ನು ಮುರಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಹೊಸ ವರ್ಷದ ಮೊದಲ ರಾತ್ರಿ ಅತಿ ಹೆಚ್ಚು ಕಾಂಡೋಮ್ ಗಳು ಸೇಲ್ ಆಗಿದೆ. ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟ ಕೂಡ ಆಗಿದೆ. ಸುಮಾರು 300 ಕೋಟಿಗೂ ಅಧಿಕ ಬೆಲೆಯ ಮದ್ಯ ಮಾರಾಟ ಕೇವಲ ಒಂದೇ ದಿನದಲ್ಲಿ ಆಗಿದೆ. ಇದೀಗ ಮದ್ಯಕ್ಕಿಂತ ಹೆಚ್ಚು ಕಾಂಡೋಮ್ ಪ್ಯಾಕೆಟ್ ಗಳು ಸೇಲ್ ಆಗಿರುವುದು ನಿಜಕ್ಕೂ ದಾಖಲೆಯೆ ಸರಿ.