ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲವಾದ ಕಾರಣ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ನಲ್ಲಿ ಇಂದು ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ. ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರೇ ಹೈಕೋರ್ಟ್ನಲ್ಲಿಯೂ ವಾದ ಮಂಡಿಸುತ್ತಿದ್ದು, ದರ್ಶನ್ಗೆ ಜಾಮೀನು ಕೊಡಿಸುವ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: 5 ವರ್ಷದ ನಂತ್ರ ಕೋಮಲ್ ಕಂಬ್ಯಾಕ್.. ಈ ವಾರ ತೆರೆ ಮೇಲೆ ‘ಯಲಾಕುನ್ನಿ’
ಇಂದು ಮುಂದೂಡಿಕೆ ಆಗಿರುವ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 28ಕ್ಕೆ ನಡೆಯಲಿದೆ. ಮೆಡಿಕಲ್ ಗ್ರೌಂಡ್ಸ್ ಆಧಾರದ ಮೇರೆಗೆ ದೀಪಾವಳಿ ಹಬ್ಬಕ್ಕೆ ದರ್ಶನ್ ಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆ ಇದೆ. ವೈದ್ಯಕೀಯ ವರದಿ ಕೊಡುವಂತೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ದರ್ಶನ್ ಗೆ ಎಮರ್ಜೆನ್ಸಿ ಟ್ರೀಟ್ಮೆಂಟ್ ಅವಶ್ಯಕತೆ, ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದ್ದಾರೆ. ಮೆಡಿಕಲ್ ವರದಿ ಆಧರಿಸಿ ಹೈಕೋರ್ಟ್ ದರ್ಶನ್ ಅವರಿಗೆ ಬೇಲ್ ಮಂಜೂರು ಮಾಡಿದರೆ ದರ್ಶನ್ ಬಾಳಿಗೆ ಬೆಳಕು ಬಂದಂತೆ ಸರಿ. ದೀಪಾವಳಿ ಹಬ್ಬಕ್ಕೆ ದರ್ಶನ್ ರಿಲೀಸ್ ಆಗ್ತಾರ ಅಥವ ಜೈಲಿನಲ್ಲೆ ಇರ್ತಾರ ಎಂಬುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ: ಸಿನಿಮಾ ಬಿಡುಗಡೆ ಮುಂಚೆಯೇ 1000 ಕೋಟಿ ಗಳಿಸಿದ ‘ಪುಷ್ಪ 2’ !