ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇವರ ನಿವ್ವಳ ಮೌಲ್ಯ 256 ಬಿಲಿಯನ್ ಯುಎಸ್ ಡಾಲರ್ ಆಗಿದೆ.
ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ವಿಶ್ವದ ಎರಡನೇ ಶ್ರೀಮಂತ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ್ದಾರೆ. ಮೆಟಾ ಸಿಇಒ ಒಟ್ಟು ಮೌಲ್ಯ 206 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಇದನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿದರೆ, ಇವರು 17.3 ಲಕ್ಷ ಕೋಟಿ ರೂ.
ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ, ಅಮೆಜಾನ್ ಕಂಪನಿಯ ಸಿಇಒ ಮೂರನೇ ಸ್ಥಾನದಲ್ಲಿದ್ದಾರೆ. ಜೆಫ್ ಬೆಜೋಸ್ ಇವರ ನಿವ್ವಳ ಮೌಲ್ಯ 209 ಬಿಲಿಯನ್ ಡಾಲರ್ (17.56 ಲಕ್ಷ ಕೋಟಿ ರೂ.) ಆಗಿದೆ. ಎಲ್ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ 193 ಬಿಲಿಯನ್ ಡಾಲರ್ (ರೂ 16.21 ಲಕ್ಷ ಕೋಟಿ) ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಸೆಪ್ಟೆಂಬರ್ 25, 2024 ರಂದು, ಮೆಟಾದ ಕನೆಕ್ಟ್ ಈವೆಂಟ್ನಲ್ಲಿ, ಮಾರ್ಕ್ ಜುಕರ್ಬರ್ಗ್ ತಮ್ಮ ಹೊಸ ಪ್ರಾಜೆಕ್ಟ್ ಮೆಟಾ-ಎಐ ಕುರಿತು ವಿಶ್ವದ ಗಮನ ಸೆಳೆದಿದ್ದರು. ಮೆಟಾ-ಎಐ ವಿಶ್ವದ ಹೆಚ್ಚು ಬಳಸುವ ಡಿಜಿಟಲ್ ಸಹಾಯಕವಾಗುವತ್ತ ಸಾಗುತ್ತಿದೆ ಎಂದು ತಿಳಿಸಿದ್ದರು. ಮಾರ್ಕ್ ಜುಕರ್ಬರ್ಗ್ ಪ್ರಕಾರ, ಸೇವೆಯು 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪಲು ಹತ್ತಿರದಲ್ಲಿದೆ ಎಂದು ಬಹಿರಂಗ ಪಡಿಸಿದ್ದರು.