- ಮಳೆರಾಯನ ಅಟ್ಟಹಾಸದಿಂದ ಸಿಡಿಲಿನ ಹೊಡೆತಕ್ಕೆ 10 ಕ್ಕೂ ಹೆಚ್ಚು ಕುರಿಗಳು ಸಾವು.
- ಯಾದಗಿರಿಯ ವಡಗೇರಿ ತಾಲೂಕಿನ ಐಕೂರು ಗ್ರಾಮದ ರೈತ ಸಾಹೇಬಣ್ಣ ಮುಂಡರಗಿ ಎಂಬುವವರಿಗೆ ಸೇರಿದ ಕುರಿಗಳು
ಯಾದಗಿರಿ: ಮಳೆರಾಯನ ಅಟ್ಟಹಾಸದಿಂದ ಸಿಡಿಲಿನ ಹೊಡೆತಕ್ಕೆ 10 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಐಕೂರು ಗ್ರಾಮದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ವಡಗೇರಿ ತಾಲೂಕಿನ ಐಕೂರು ಗ್ರಾಮದ ರೈತ ಸಾಹೇಬಣ್ಣ ಮುಂಡರಗಿ ಎಂಬುವವರಿಗೆ ಸೇರಿದ ಕುರಿಗಳು ಮಳೆಯ ಹೊಡೆತಕ್ಕೆ ಬಲಿಯಾಗಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದೆ. ಮಳೆಯ ಅವಾಂತರ ಒಂದೆಡೆಯಾದ್ರೆ, ಸಿಡಿಲಿನ ಹೊಡೆತದಿಂದಾಗಿ ಸಾವನ್ನಪ್ಪಿದ ಕುರಿಗಳಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಕುರಿಗಾಯಿ ಕುಟುಂಬ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.