ನಟ ರಾಕಿಂಗ್ ಸ್ಟಾರ್ ಯಶ್ ವಕೀಲ ಗೆಟಪ್ನಲ್ಲಿರೋ ಸ್ಟಿಲ್ ಫೋಟೋಸ್ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಇದು ರಾಕಿಭಾಯ್ ಮುಂದಿನ ಸಿನಿಮಾ ಟಾಕ್ಸಿಕ್ನ ಮತ್ತೊಂದು ನೂತನ ಗೆಟಪ್ ಎನ್ನಲಾಗುತ್ತಿತ್ತು. ಆದ್ರೆ ಟಾಕ್ಸಿಕ್ ಸಿನಿಮಾದ ನಿರ್ಮಾಪಕರಾದ KVN ಪ್ರೊಡಕ್ಷನ್ಸ್ನ ಸುಪ್ರೀತ್ ಅವರೇ ನಮ್ಮ ಗ್ಯಾರಂಟಿ ನ್ಯೂಸ್ಗೆ ಈ ವಿಡಿಯೋ, ಫೋಟೋಸ್ ಹಾಗೂ ಯಶ್ರ ಅಡ್ವೊಕೇಟ್ ಲುಕ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದು ಟಾಕ್ಸಿಕ್ ಚಿತ್ರದ್ದು ಅಲ್ಲವೇ ಅಲ್ಲ. ಮುಂಬೈನಲ್ಲಿ ಚಿತ್ರೀಕರಿಸಲಾಗಿರೋ ಜಾಹೀರಾತುವೊಂದರ ದೃಶ್ಯಾವಳಿ ಎಂದಿದ್ದಾರೆ.
ಟಾಕ್ಸಿಕ್ ಸಿನಿಮಾ ಅನೌನ್ಸ್ ಆದಾಗ ಟೈಟಲ್ ಜೊತೆ ರಿಲೀಸ್ ಡೇಟ್ ಹಾಗೂ ಯಶ್ ಗ್ಯಾಂಗ್ಸ್ಟರ್ ರೀತಿ ಕೌಬಾಯ್ ಹ್ಯಾಟ್ ಧರಿಸಿ, ಗನ್ ಹಿಡಿದಿರೋ ಲುಕ್ ಹೊರಬಿದ್ದಿತ್ತು. ಆದ್ರೀಗ ವಕೀಲ್ ಸಾಬ್ ಗೆಟಪ್ನಲ್ಲಿರೋದನ್ನ ಕಂಡು ಟಾಕ್ಸಿಕ್ನಲ್ಲಿ ಯಶ್ ಡಬಲ್ ರೋಲ್ನಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಅದೇನೇ ಇರಲಿ, ಲಾಂಗ್ ಹೇರ್ನ ಕಟ್ ಮಾಡಿಸಿರೋ ನ್ಯಾಷನಲ್ ಸ್ಟಾರ್, ಅದೇ ಲುಕ್ನಲ್ಲಿ ಕರಿಕೋಟು ಧರಿಸಿ ವಕೀಲ್ಸಾಬ್ ಆಗಿ ಮಿಂಚ್ತಿರೋದು ಫ್ಯಾನ್ಸ್ ಸೇರಿದಂತೆ ಅವರ ಹಿತೈಷಿಗಳಿಗೂ ಇಷ್ಟವಾಗಿದೆ.