ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿದ್ದು, ಆ ಅಪಘಾತದಿಂದ ಬೆನ್ನುಮೂಳೆಯ ಮುರಿತಕ್ಕೆ ಒಳಗಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರೋಗ್ಯವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿಚಾರಿಸಿದ್ದಾರೆ. ಆರೋಗ್ಯ ವಿಚಾರಿಸಿ ಜಮೀರ್ ಅಹ್ಮದ್ ಖಾನ್ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಸಂಕ್ರಾಂತಿ ದಿನದಂದು ಮುಂಜಾನೆ 5 ಗಂಟೆ ಸುಮಾರಿಗೆ ಅಧಿಕೃತ ಸರ್ಕಾರಿ ಕಾರ್ನಲ್ಲಿ ಪ್ರಯಾಣ ಮಾಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಕ್ಯಾಂಟರ್ನ ಅಜಾಗರೂಕತೆ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನು ಮೂಳೆಯ ಎಲ್1 ಹಾಗೂ ಎಲ್4ನಲ್ಲಿ ಸಣ್ಣ ಪ್ರಮಾಣದ ಹೇರ್ಲೈನ್ ಫ್ರಾಕ್ಚರ್ ಆಗಿದ್ದಾಗಿ ವೈದ್ಯರು ತಿಳಿಸಿದ್ದು, ಮೂರು ವಾರಗಳ ಕಾಲ ಬೆಡ್ರೆಸ್ಟ್ಗೆ ಸೂಚಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ;https://whatsapp.com/channel/0029VafyCqRFnSzHn1JWKi1B