ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2024’ ಕ್ಷಣಗಣನೆ ಶುರುವಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿದ್ದ ಎಂಟರ್ಟೈನ್ಮೆಂಟ್ ನ ಮಹಾಪರ್ವ ಇದೇ ತಿಂಗಳ 25, 26 ಮತ್ತು 27 ರಂದು ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 6:30 ರಿಂದ ಪ್ರಸಾರ ಆಗಲಿದೆ.
ಮನರಂಜನೆಯ ಹಬ್ಬಕ್ಕೆ ಮೆರುಗಿನ ಆರಂಭ ನೀಡಿದ್ದು ‘ರೆಡ್ ಕಾರ್ಪೆಟ್’ನಲ್ಲಿ ಅಂದ ಚೆಂದದ ಉಡುಗೆ ತೊಟ್ಟು ಮಸ್ತ್ ಆಗಿ ಬಂದ ತಾರೆಯರು. ನೆಚ್ಚಿನ ತಾರೆಯರು ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2024- Red Carpet’ ನಲ್ಲಿ ಕಲರ್ ಕಲರ್ ಉಡುಗೆಯಲ್ಲಿ ಮಿಂಚಿದ್ದರ ಝಲಕ್ ನಿಮ್ಮ ಮುಂದೆ 25 ಮತ್ತು 26 ರಂದು ಸಂಜೆ 5:30ಕ್ಕೆ ಪ್ರಸಾರ ಆಗಲಿದೆ.
‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2024’ ಕಾರ್ಯಕ್ರಮವನ್ನು ಕನ್ನಡದ ಖ್ಯಾತ ನಿರೂಪಕ/ನಿರೂಪಕಿಯರಾದ ಅನುಶ್ರೀ, ಅಕುಲ್ ಬಾಲಾಜಿ, ಶ್ವೇತ ಚಂಗಪ್ಪ ಮತ್ತು ಕುರಿ ಪ್ರತಾಪ್ ಅವರು ನಡೆಸಿಕೊಡಲಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಜೀ಼ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯ ಪ್ರೋಮೋವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕ್ರೇಜಿಸ್ಟಾರ್ ರವಿಚಂದ್ರನ್, ಡಾನ್ಸ್ ಕಿಂಗ್ ಶಶಿಕುಮಾರ್, ಶರಣ್, ಮತ್ತು ರಾಜ್ ಬಿ ಶೆಟ್ಟಿ, ಡಾಲಿ ಧನಂಜಯ್, ಕಾಂತಾರ ಬೆಡಗಿ ಸಪ್ತಮಿ ಗೌಡ, ನವಜೋಡಿಗಳಾದ ತರುಣ್ ಸುಧೀರ್ ಮತ್ತು ಸೋನಲ್, ರೋರಿಂಗ್ ಸ್ಟಾರ್ ಮುರಳಿ, ಕೃಷ್ಣ ಅಜಯ್ ರಾವ್, ನೀನಾಸಂ ಸತೀಶ್, ರುಕ್ಮಿಣಿ ವಸಂತ್, ಆರಾಧನಾ ರಾಮ್, ಸಂಯುಕ್ತ ಹೊರನಾಡು, ಶರ್ಮಿಳಾ ಮಾಂಡ್ರೆ, ಅರ್ಚನ ಜೋಯಿಸ್, ಅಮೃತಾ ಐಯ್ಯಂಗಾರ್, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ಮಾಳವಿಕಾ ಅವಿನಾಶ್, ಪ್ರೇಮ, ನಿಶ್ವಿಕಾ ನಾಯ್ಡು ಸಂಸದರಾದ ಡಾ. ಸಿ.ಏನ್ ಮಂಜುನಾಥ್ ಮತ್ತಿತರು ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2024’ ರಂಗನ್ನು ಮತ್ತಷ್ಟು ಮೆರುಗುಗೊಳಿಸಲಿದ್ದಾರೆ. ಇದೇ ವೇಳೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ‘ಭೈರತಿ ರಣಗಲ್’ ಆಗಿ ಎಂಟ್ರಿ ಕೊಟ್ಟಿದ್ದು ಮತ್ತೊಂದು ಹೈಲೈಟ್ ಆಗಿತ್ತು.
ಕಲಾವಿದರ ಸಾಧನೆಗಳನ್ನು ಗೌರವಿಸುವ ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್’ ಮತ್ತೆ ನಿಮ್ಮ ಮುಂದೆ. ಈ ಬಾರಿಯ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕನ್ನಡ ಚಲನಚಿತ್ರ ತಾರೆಯರು ಹಾಗು ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿದ್ದು ಇದರ ಮತ್ತೊಂದು ಆಕರ್ಷಣೆ. ನೆಚ್ಚಿನ ತಾರೆಯರು ಅವರ ಅವಿಸ್ಮರಣೀಯ ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಎರಡು ಮಾತಿಲ್ಲ. ಯಾರು ಯಾವ ಪ್ರಶಸ್ತಿಗೆ ಭಾಜೀನರಾದರು, ಯಾರು ಯಾವ ಹಾಡಿಗೆ ನೃತ್ಯ ಮಾಡಿದರು, ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಹೀಗೆ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ನಗು, ತರ್ಲೆ, ಅಳು, ನೋವು, ನಲಿವು ಮತ್ತು ಇನ್ನಷ್ಟು ಭಾವನೆಗಳ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ನೋಡಿ ‘ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2024!